ಅಯೋಧ್ಯಾ (ಉತ್ತರ ಪ್ರದೇಶ): ಬಹು ನಿರೀಕ್ಷೆ ಇಟ್ಟುಕೊಂಡಿರುವ ಅಯೋಧ್ಯಾ ರಾಮಮಂದಿರ ದೇವಾಲಯದ ಅಡಿಪಾಯದ ವಿನ್ಯಾಸವನ್ನು ಡಿಸೆಂಬರ್ 15 ರಂದು ಪ್ರಧಾನ ಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ಸಲ್ಲಿಸಲಾಗುವುದು ಎಂದು ರಾಮ ದೇವಾಲಯ ನಿರ್ಮಾಣ ಸಮಿತಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಯೋಧ್ಯೆಯ ನಿರ್ಮಾಣದಲ್ಲಿ ರಾಮಮಂದಿರವನ್ನು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಪರಿಣಿತರು ಹಾಗೂ ಇಂಜಿನಿಯರ್ಗಳು ಇದ್ದಾರೆ ಎಂದು ರಾಮ ದೇವಾಲಯ ನಿರ್ಮಾಣ ಸಮಿತಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 'ಭಾರತ ಹಿಂದೂ ರಾಷ್ಟ್ರ' ಘೋಷಣೆಗೆ ಒತ್ತಾಯಿಸಿ ಪರಮಹಂಸ ದಾಸ್ ಅಮರಣಾಂತ ಸತ್ಯಾಗ್ರಹ
ಈ ಸಮಿತಿಯು ಎಂಟು ಸದಸ್ಯರನ್ನು ಹೊಂದಿದ್ದು, ಈ ಸಮಿತಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಐಐಟಿ) ದೆಹಲಿ ಮಾಜಿ ನಿರ್ದೇಶಕ ವಿ.ಎಸ್.ರಾಜು ನೇತೃತ್ವ ವಹಿಸಿದ್ದಾರೆ. ವಿ.ಎಸ್.ರಾಜು ನೇತೃತ್ವ ಸಮಿತಿಯ ಮುಖ್ಯ ಉದ್ದೇಶ ರಾಮಮಂದಿರಕ್ಕೆ ಅಡಿಪಾಯ ಹಾಕುವ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದಾಗಿದೆ.
ದೇವಾಲಯದ ವಿನ್ಯಾಸವನ್ನು ಚರ್ಚಿಸಿ, ಅಂತಿಮಗೊಳಿಸಲು ಲಾರ್ಸೆನ್ ಆ್ಯಂಡ್ ಟಬ್ರೊ ಮತ್ತು ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್‌ನ ತಜ್ಞರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.