ಛತ್ತೀಸ್ಘಢ: ದೇಶದ ಹಲವೆಡೆ ಅತಿವೃಷ್ಟಿಯಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಛತ್ತೀಸ್ಘಢದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಈ ನಡುವೆ ಬಲರಾಮ್ಪುರ ಎಂಬ ಹಳ್ಳಿಯಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಮಾನಿವೀಯತೆ ಮೆರೆದು ಸುದ್ದಿಯಾಗಿದ್ದಾರೆ.
ಇಲ್ಲಿನ ಆರೋಗ್ಯ ಕಾರ್ಯಕರ್ತೆ ಕಾಲ್ನಡಿಗೆಯಲ್ಲೇ ನದಿ ದಾಟಿ ಹೋಗಿ ಹಳ್ಳಿ ತಲುಪಿ ಅಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ.
"ನದಿಯಲ್ಲಿ ನೀರು ಅಧಿಕವಾಗಿತ್ತು; ಆರಂಭದಲ್ಲಿ ನದಿ ದಾಟಲು ಭಯಗೊಂಡಿದ್ದೆ. ಆದರೆ ನಿಧಾನವಾಗಿ ನಡೆದು ನದಿ ದಾಟಿ ಹಳ್ಳಿ ತಲುಪಿದೆ" ಎಂದು ಆರೋಗ್ಯ ಕಾರ್ಯಕರ್ತೆ ಹೇಳಿದ್ದಾರೆ.
ಛತ್ತೀಸ್ಘಢದ ದಕ್ಷಿಣ ಭಾಗದಲ್ಲಿ ಜೋರಾಗಿ ಮಳೆಯಾಗುತ್ತಿದ್ದು, ಇದರಿಂದ ನದಿಗಳು ಉಕ್ಕಿ ಹರಿಯುತ್ತವೆ. ಹಲವಾರು ನದಿಗಳು ಜಲಾವೃತವಾಗಿದ್ದು ಸಂಪರ್ಕಿಸುವುದೇ ಕಷ್ಟವಾಗಿದೆ. ಆದರೆ ಆರೋಗ್ಯ ಕಾರ್ಯಕರ್ತೆ ನಡೆದುಕೊಂಡೇ ನದಿ ದಾಟುವ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.