ರಂಗಾರೆಡ್ಡಿ (ತೆಲಂಗಾಣ): ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಶಾದ್ನಗರ ಪೊಲೀಸರು ರಂಗಾರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ. 28 ರಂದು ಹೈದರಾಬಾದ್ನ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಬಳಿಕ ಆಕೆಯ ದೇಹವನ್ನು ಸುಟ್ಟು ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದರು. ಬಳಿಕ ರಂಗಾರೆಡ್ಡಿ ಕೋರ್ಟ್, 14 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಶಾದ್ನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
-
Patna: Doctors hold a protest against the rape & murder of woman veterinarian in Telangana, demanding capital punishment for the rapists. #Bihar pic.twitter.com/R8If9qDfVl
— ANI (@ANI) December 2, 2019 " class="align-text-top noRightClick twitterSection" data="
">Patna: Doctors hold a protest against the rape & murder of woman veterinarian in Telangana, demanding capital punishment for the rapists. #Bihar pic.twitter.com/R8If9qDfVl
— ANI (@ANI) December 2, 2019Patna: Doctors hold a protest against the rape & murder of woman veterinarian in Telangana, demanding capital punishment for the rapists. #Bihar pic.twitter.com/R8If9qDfVl
— ANI (@ANI) December 2, 2019
ಅಲ್ಲದೇ ಅಪರಾಧ ಸಂಬಂಧ FIR ದಾಖಲಿಸುವಲ್ಲಿ ವಿಳಂಬ ಮಾಡಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪಾಟ್ನಾದಲ್ಲಿ ವೈದ್ಯರ ಪ್ರತಿಭಟನೆ:
ಇನ್ನು ದೇಶಾದ್ಯಂತ ಪೈಶಾಚಿಕ ಕೃತ್ಯವನ್ನು ಖಂಡಿಸಿ, ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಬಿಹಾರದ ಪಾಟ್ನಾದಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ನೂರಾರು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.
-
Chandigarh Pradesh Mahila Congress holds protest against rape & murder of woman veterinarian in Telangana, demanding capital punishment for the rapists. pic.twitter.com/j3zrvkaJKl
— ANI (@ANI) December 2, 2019 " class="align-text-top noRightClick twitterSection" data="
">Chandigarh Pradesh Mahila Congress holds protest against rape & murder of woman veterinarian in Telangana, demanding capital punishment for the rapists. pic.twitter.com/j3zrvkaJKl
— ANI (@ANI) December 2, 2019Chandigarh Pradesh Mahila Congress holds protest against rape & murder of woman veterinarian in Telangana, demanding capital punishment for the rapists. pic.twitter.com/j3zrvkaJKl
— ANI (@ANI) December 2, 2019
ಚಂಡೀಗಢದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.