ETV Bharat / bharat

ಕೊರೊನಾ ಸೋಂಕಿಲ್ಲ, ಗ್ರಾಮಸ್ಥರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ - ರೈಲ್ವೆ ಹಳಿಗೆ ಹಾರಿ ಸಾವು

ಮಹಾಮಾರಿ ಕೊರೊನಾದಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲ್ಲೊಂದೆಡೆ ಕೊರೊನಾ ಇದೆ ಎಂಬ ಭಯ ಹಾಗೂ ಗ್ರಾಮಸ್ಥರ ಕಿರುಕುಳಕ್ಕೊಳಗಾಗಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ.

Father-of-two jumps
Father-of-two jumps
author img

By

Published : Apr 4, 2020, 8:43 PM IST

ಇಂದೋರ್​​: ಕೂಲಿ ಕಾರ್ಮಿಕನೊಬ್ಬ ಕಳೆದ ಕೆಲ ದಿನಗಳ ಹಿಂದೆ ಕೇರಳದಿಂದ ತನ್ನ ಸಹೋದರಿ ವಾಸವಾಗಿದ್ದ ಇಂದೋರ್​ಗೆ ಆಗಮಿಸಿದ್ದ. ಈ ವೇಳೆ ಅತನಿಗೆ ಜ್ವರ ಕಾಣಿಸಿಕೊಂಡದ್ದರಿಂದ ನೆರೆಹೊರೆಯವರು ಕೊರೊನಾ ಸೋಂಕಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

ನೆರೆಹೊರೆಯವರ ಮಾತು ಕೇಳಿ ಮನನೊಂದ ಮುಸ್ತಾಫಾ ಹಾಗೂ ಆತನ ತಾಯಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದು, ಈ ವೇಳೆ ಅವರಿಗೆ ಯಾವುದೇ ರೀತಿಯ ಸೋಂಕು ಇಲ್ಲ ಎಂದ ವೈದ್ಯರು ಹೇಳಿದ್ದಾರೆ. ರಾತ್ರಿ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಈ ವೇಳೆ ನೆರೆಹೊರೆಯವರು ಮಧ್ಯರಾತ್ರಿ ಮನೆ ಬಿಟ್ಟು ಹೊರಹೋಗುವಂತೆ ಒತ್ತಾಯಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಗ್ರಾಮಕ್ಕೆ ಬಂದ ಪೊಲೀಸರು ಅವರನ್ನ ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮರುದಿನ ಮುಸ್ತಫಾ ಹಾಗೂ ಅವರ ತಾಯಿಯನ್ನ ಕಸ ತುಂಬುವ ಟ್ರಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮತ್ತೊಮ್ಮೆ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿ ನೆಗೆಟಿವ್​ ವರದಿ ನೀಡಿದ್ದಾರೆ.

ಗ್ರಾಮಸ್ಥರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇದರಿಂದ ಮನನೊಂದು ಆತ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನಿಗೆ ಇಬ್ಬರು ಮಕ್ಕಳಿದ್ದು, ಕೇರಳದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕರ್ಫ್ಯೂ ವಿಧಿಸಿದ್ದ ಕಾರಣ ಇಂದೋರ್​ಗೆ ಆಗಮಿಸಿದ್ದನು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.