ETV Bharat / bharat

ಸರಿಯಾಗಿ ಓದುತ್ತಿಲ್ಲವೆಂದು ಬಿಸಿ ಚಾಕುವಿನಿಂದ ಮಗನ ಸುಟ್ಟ ತಂದೆ! - ಮಗುವಿನ ಮೇಲೆ ತಂದೆ ಹಲ್ಲೆ

ಸರಿಯಾಗಿ ಪಾಠ ಕಲಿಯುತ್ತಿಲ್ಲ ಎಂದು ಆಕ್ರೋಶಗೊಂಡ ತಂದೆ ಮಗುವಿನ ಮೇಲೆ ಸುಡುವ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.

Arrest
Arrest
author img

By

Published : Feb 2, 2021, 6:44 PM IST

ಪಥನಮತ್ತಟ್ಟ(ಕೇರಳ): ಮಗು ಸರಿಯಾಗಿ ಓದುತ್ತಿಲ್ಲ ಎಂದು ಆಕ್ರೋಶಗೊಂಡ ಪಾಪಿ ತಂದೆಯೊಬ್ಬ ಸುಡುವ ಚಾಕುವಿನಿಂದ ಆತನ ದೇಹ ಸುಟ್ಟಿರುವ ಘಟನೆ ಕೇರಳದ ಪಥನಮತ್ತಟ್ಟದಲ್ಲಿ ನಡೆದಿದೆ.

ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಬಾಲಕ ಟ್ಯೂಷನ್​​ನಲ್ಲಿ ಹೇಳಿರುವ ಪಾಠ ಸರಿಯಾಗಿ ಕಲಿಯದ ಕಾರಣಕ್ಕಾಗಿ ಜನವರಿ 30ರಂದು ತಂದೆ ಈ ಕ್ರೌರ್ಯ ಮೆರೆದಿದ್ದಾನೆ. ಈಗಾಗಲೇ 31 ವರ್ಷದ ಶ್ರೇಕುಮಾರ್​ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಲ್ಲಿಕ್ಕಲ್ ಕಡಮಂಕುಲಂನಲ್ಲಿ ವಾಸವಾಗಿದ್ದ ಶ್ರೀಕುಮಾರ್​​ ದಿನಗೂಲಿ ಕೆಲಸಗಾರನಾಗಿ ಹಾಗೂ ಪತ್ನಿ ಸಲಾಮತ್​ ಹೋಟೆಲ್​ನಲ್ಲಿ ಕೆಲಸ ಮಾಡ್ತಿದ್ದರು. ಶಾಲೆ ಬಂದ್ ಆಗಿರುವ ಕಾರಣ ಪೋಷಕರು ಹುಡುಗನನ್ನು ಮನೆಯ ಸಮೀಪದಲ್ಲಿರುವ ಟ್ಯೂಷನ್​​ ಕ್ಲಾಸ್​ಗೆ ಕಳುಹಿಸುತ್ತಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಸರಿಯಾಗಿ ಪಾಠ ಕಲಿಯುವಂತೆ ಶ್ರೀಕುಮಾರ್​ ಸೂಚನೆ ನೀಡಿದ್ದರು. ಸಂಜೆ ಮನೆಗೆ ಬಂದು ವಿದ್ಯಾರ್ಥಿ ಬಳಿ ಇದರ ಬಗ್ಗೆ ಕೇಳಿದಾಗ ಆತ ತಡವರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ತಂದೆ ಬಿಸಿ ಚಾಕುವಿನಿಂದ ಮಗುವಿನ ಕಾಲು ಸುಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸಲಾಮತ್ ದೂರು ನೀಡಿದ್ದು, ಮಕ್ಕಳ ಕಲ್ಯಾಣ ಇಲಾಖೆ ಪ್ರಕರಣ ದಾಖಲು ಮಾಡಿಕೊಂಡಿದೆ.

ತನಿಖೆ ನಡೆಸಿದಾಗ ಮೇಲಿಂದ ಮೇಲೆ ತಂದೆ ಮಗುವಿಗೆ ಹಿಂಸೆ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ವಶಕ್ಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.