ETV Bharat / bharat

ಮೊಬೈಲ್​ ಫೋನ್​ ಮುಟ್ಟಿದ್ದಕ್ಕೆ ಮೂರು ವರ್ಷದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ - ಮೊಬೈಲ್​ ಫೋನ್​

ಮಗು ಆಟವಾಡಲು ತಂದೆಯ ಮೊಬೈಲ್​ನ್ನು ತೆಗೆದುಕೊಂಡಿದೆ. ಇಷ್ಟಕ್ಕೆ ಸಿಟ್ಟಾದ ತಂದೆ ಮೊಬೈಲ್​ ಚಾರ್ಜ್​ರ್​ನಿಂದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಮಗುವಿನ ದೇಹದಲ್ಲಿ ಬಾಸುಂಡೆ ಎದ್ದಿದೆ. ಇಂತಹ ದಾರುಣ ಘಟನೆಯೊಂದು ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ.

Father beat his child brutally
author img

By

Published : Aug 18, 2019, 5:50 AM IST

ಗ್ರೇಟರ್​ ನೋಯ್ಡಾ: ತಂದೆಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನದೇ ಮೂರು ವರ್ಷದ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ.

ಮಗು ಆಟವಾಡಲು ತಂದೆಯ ಮೊಬೈಲ್​ನ್ನು ತೆಗೆದುಕೊಂಡಿದೆ. ಇಷ್ಟಕ್ಕೆ ಸಿಟ್ಟಾದ ತಂದೆ ಮೊಬೈಲ್​ ಚಾರ್ಜ್​ರ್​ನಿಂದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಮಗುವಿನ ದೇಹದಲ್ಲಿ ಬಾಸುಂಡೆ ಎದ್ದಿದೆ. ಅಲ್ಲದೇ ಮಗುವನ್ನು ಥಳಿಸಿದ್ದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಮೇಲೆಯೂ ದುರುಳ ಪತಿ ಹಲ್ಲೆ ಮಾಡಿದ್ದಾನೆ. ಇದರಿಂದ ಕಂಗೆಟ್ಟ ಪತ್ನಿ ಮುನೇಜಾ, ಪೊಲೀಸರಿಗೆ ದೂರು ನೀಡಿದ್ದಾಳೆ.

ಫೋನ್​ ಮುಟ್ಟಿದ್ದಕ್ಕೆ ಮುಗುವಿಗೆ ಥಳಿಸಿರುವುದು

ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಕಸ್ಟಡಿಗೆ ಪಡೆದಿದ್ದಾರೆ. ಆರೋಪಿಯೂ ಅನ್ಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ದಿನವೂ ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ, ಮಗುವಿನ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲೂ ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಗ್ರೇಟರ್​ ನೋಯ್ಡಾದ ಡಿವೈಎಸ್​ಪಿ ತನು ಉಪಾಧ್ಯಾಯ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೌಟುಂಬಿಕ ಕಲಹದಿಂದಾಗಿ ಕ್ಷುಲ್ಲಕ ಕಾರಣಕ್ಕೆ ಏನೂ ತಿಳಿಯದ ಮಗುವೊಂದು ಏಟು ತಿನ್ನುವಂತಾಗಿದ್ದು ದುರಂತವೇ ಸರಿ..

Intro:Body:

ಮೊಬೈಲ್​ ಫೋನ್​ ಮುಟ್ಟಿದ್ದಕ್ಕೆ ಮೂರು ವರ್ಷದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.