ಶ್ರೀನಗರ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಮುಬಾರಕ್ ಹೋ, ನೀವು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೀರಿ ಎಂದಿರುವ ಫಾರೂಖ್ ಅಬ್ದುಲ್ಲಾ, ರಾಹುಲ್ ಗಾಂಧಿ ಇನ್ನು ಯುವಕ, ಮುಂದಿನ ದಿನಗಳಲ್ಲಿ ಈ ಹುದ್ದೆ ಅಲಂಕರಿಸುವ ಅವಕಾಶ ಬರುತ್ತದೆ. ಹಿಂದಿನಿಂದಲೂ ಆ ಸ್ಥಾನಕ್ಕೆ ಬೇರೆ ವ್ಯಕ್ತಿ ಆಯ್ಕೆಗೊಳ್ಳಬೇಕು ಎಂಬುದು ರಾಹುಲ್ ಗಾಂಧಿ ಅವರ ಅಶಯವಾಗಿತ್ತು. ಲೋಕಸಭಾ ಚುನಾವಣೆ ಸೋಲಿನಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಇನ್ಮುಂದೆ ರಾಹುಲ್ ಗಾಂಧಿ ಸಣ್ಣ ಕಾರ್ಯಕರ್ತರಂತೆ ಕೆಲಸ ಮಾಡಿ, ಪಕ್ಷವನ್ನ ತಳಮಟ್ಟದಿಂದ ಬಲಿಷ್ಠಗೊಳಿಸಬಹುದು ಎಂದು ಹೇಳಿದ್ದಾರೆ.
-
Rahul Gandhi has removed 'Congress President' from his bio on his Twitter account. pic.twitter.com/32lWzWWoVv
— ANI (@ANI) July 3, 2019 " class="align-text-top noRightClick twitterSection" data="
">Rahul Gandhi has removed 'Congress President' from his bio on his Twitter account. pic.twitter.com/32lWzWWoVv
— ANI (@ANI) July 3, 2019Rahul Gandhi has removed 'Congress President' from his bio on his Twitter account. pic.twitter.com/32lWzWWoVv
— ANI (@ANI) July 3, 2019
ಇನ್ನು ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಟ್ವೀಟರ್ ತಾವು ಹಾಕಿಕೊಂಡಿದ್ದ ಎಐಸಿಸಿ ಅಧ್ಯಕ್ಷ ಎಂಬ ಅಡಿ ಬರಹವನ್ನ ತೆಗೆದುಹಾಕಿದ್ದ,@ ರಾಹುಲ್ ಗಾಂಧಿ ಎಂಬ ಸಾಲನ್ನು ಮಾತ್ರ ಉಳಿಸಿಕೊಂಡಿದ್ದಾರೆ.