ಜೈಸಲ್ಮೇರ್: ರಾಜಸ್ಥಾನದ ಗಡಿಯಲ್ಲಿ ಸರಿಯಾದ ಬೇಲಿ ಇಲ್ಲದ ಕಾರಣ ಮೇಯಲು ಹೋದ ಮೇಕೆಗಳು ಬೇಲಿ ದಾಟಿ ಪಾಕಿಸ್ತಾನಕ್ಕೆ ಹೋಗುತ್ತಿವೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮೇಕೆ ಸಾಕಾಣಿಕೆಯೇ ಬಹಳಷ್ಟು ಜನರ ಹೊಟ್ಟೆಪಾಡು. ಜೊತೆಗೆ ಮೇಕೆಗಳ ಮೇಲೆಯೇ ಜನರು ಅವಲಂಬಿತರಾಗಿದ್ದಾರೆ. ಹೀಗಿರುವಾಗ ನೂರಾರು ಮೇಕೆಗಳು ಮೇಯುತ್ತಾ ಗಡಿಯಲ್ಲಿ ಬೇಲಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದು, ಮರಳಿ ಬಂದಿಲ್ಲ. ಇದರಿಂದ ಜೀವನೋಪಾಯಕ್ಕೆ ಮೇಕೆಗಳನ್ನೇ ನಂಬಿದ್ದ ರೈತರು ಕಂಗಾಲಾಗಿ ಕುಂತಿದ್ದಾರೆ.
ಸ್ಥಳೀಯ ಬಲ್ವೀರ್ ಸಿಂಗ್ ಈಟಿವಿ ಭಾರತ ಜೊತೆ ಮಾತನಾಡಿ, ಗಡಿಯಲ್ಲಿ ಸರಿಯಾದ ಬೇಳಿ ಇಲ್ಲದ ಹಿನ್ನೆಲೆ ಮೇಯಲು ಹೋಗಿದ್ದ ಮೇಕೆಗಳು ಬೇಲಿ ದಾಟಿ ಪಾಕಿಸ್ತಾನಕ್ಕೆ ಹೋಗಿವೆ. ಮೇಕೆಗಳು ಇಲ್ಲಿನ ರೈತರ ಜೀವನಾಧಾರ. ಈಗಾಗಲೇ ನೂರಾರು ಮೇಕೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ಕಳೆದಿರುವ ಮೇಕೆಗಳನ್ನು ಮರಳಿ ತರಲು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಂಡು, ನಮಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಮಸ್ಯೆ ಬಗೆಹರಿಸುವಂತೆ ಹಾಗೂ ಮೇಕೆಗಳನ್ನು ಮರಳು ತರುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.