ETV Bharat / bharat

ಪಿಎಂ ಕಿಸಾನ್ ಪಿಂಚಣಿ: ರೈತರು ತಿಂಗಳಿಗೆ 100 ರೂ. ಪಾವತಿಸಿದರೆ ₹ 3,000 ರಿಟರ್ನ್​ -

ಪಿಎಂ ಕಿಸಾನ್ ಪಿಂಚಣಿ ಯೋಜನೆಯ ಫಲಾನುಭವಿ ರೈತರು ಮಾಸಿಕ ₹ 100 ವಿಮಾ ಕಂತು ಪಾವತಿಸಿದರೆ 60 ವರ್ಷ ದಾಟಿದ ಬಳಿಕ ಸರ್ಕಾರ ಪ್ರತಿ ತಿಂಗಳು ಕನಿಷ್ಠ 3,000 ರೂ. ಪಿಂಚಣಿ ಮರುಪಾವತಿಸಲಿದೆ.

ಸಾಂದರ್ಭಿಕ ಚಿತ್ರ
author img

By

Published : Jun 14, 2019, 8:52 AM IST

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ-2 ಸರ್ಕಾರ ಮೊದಲ ಸಂಪುಟ ಸಭೆಯಲ್ಲಿ 5 ಕೋಟಿ ರೈತರಿಗೆ ಅನುಕೂಲ ಆಗುವಂತಹ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ.

ಪಿಎಂ ಕಿಸಾನ್ ಪಿಂಚಣಿ ಯೋಜನೆಯ ಫಲಾನುಭವಿ ರೈತರು ಮಾಸಿಕ ₹ 100 ವಿಮಾ ಕಂತು ಪಾವತಿಸಿದರೆ 60 ವರ್ಷ ದಾಟಿದ ಬಳಿಕ ಸರ್ಕಾರ ಪ್ರತಿ ತಿಂಗಳು ಕನಿಷ್ಠ 3,000 ರೂ. ಪಿಂಚಣಿಯನ್ನು ಮರುಪಾವತಿಸಲಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ದೇಶದ ಎಲ್ಲ 14.5 ಕೋಟಿ ರೈತರಿಗೆ ನೀಡುವ ಗುರಿ ಇರಿಸಿಕೊಂಡಿದೆ. ಇದರಲ್ಲಿ ಸುಮಾರು 5 ಕೋಟಿ ಫಲಾನುಭವಿ ರೈತರಿಗೆ ಪಿಂಚಣಿ ಲಾಭ ಒದಗಿಸಿ ಮುಂದಿನ 3 ವರ್ಷದಲ್ಲಿ ₹ 10,774 ಕೋಟಿ ನೀಡಲಿದೆ. 18ರಿಂದ 40 ವರ್ಷದ ಒಳಗಿನ ರೈತರು ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ರೈತರು ಪ್ರತಿ ತಿಂಗಳು 100 ರು. ಪಾವತಿಸಿದರೆ, ಸರ್ಕಾರ ಕೂಡ ಅಷ್ಟೇ ಮೊತ್ತದ ಹಣವನ್ನು ಒದಗಿಸಲಿದೆ. ಎಲ್‌ಐಸಿ ಪಿಂಚಣಿ ಯೋಜನೆ ನಿರ್ವಹಿಸುವ ಜವಾಬ್ದಾರಿ ಪಡೆದುಕೊಂಡಿದೆ. ''ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆ ಯಶಸ್ವಿಗೆ ಸಹಕರಿಸಿ ಆದಷ್ಟು ಬೇಗ ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಿ'' ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಕೋರಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.