ETV Bharat / bharat

ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ರಸ್ತೆ ಸಂಚಾರ ತಡೆಯುವ ಹಕ್ಕಿಲ್ಲ: ಸುಪ್ರೀಂಕೋರ್ಟ್ - ನವದೆಹಲಿಯಲ್ಲಿ ರೈತರ ಪ್ರತಿಭಟನೆ

ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದು, ಅದು ಎರಡೂ ಕಡೆಯವರ ಮನವಿ ಆಲಿಸಿ ಪರಿಹಾರಗಳನ್ನು ಸೂಚಿಸಲಿದೆ.

Supreme Court
ಸುಪ್ರೀಂಕೋರ್ಟ್
author img

By

Published : Dec 17, 2020, 3:45 PM IST

ನವದೆಹಲಿ: ಆಸ್ತಿ-ಪಾಸ್ತಿ ನಾಶ ಮಾಡದೆ ಅಥವಾ ಜೀವಕ್ಕೆ ಅಪಾಯ ಮಾಡದೆ ನಡೆಸುವ ಪ್ರತಿಭಟನೆ ಸಾಂವಿಧಾನಿಕವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಸಂಬಂಧ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಚರ್ಚೆಯಲ್ಲಿ ಪಾಲ್ಗೊಳ್ಳದೆ ಕೇವಲ ಪ್ರತಿಭಟನೆ ನಡೆಸಿದರೆ ರೈತರ ಹೋರಾಟದ ಉದ್ದೇಶ ಸಫಲವಾಗುವುದಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು, ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದು, ಅದು ಎರಡೂ ಕಡೆಯವರ ಮನವಿ ಆಲಿಸಿ ಪರಿಹಾರಗಳನ್ನು ಸೂಚಿಸಲಿದೆ.

  • Farm laws matter: CJI says,farmers have right to protest. We won't interfere with it but the manner of protest is something we will look into. We will ask Centre what is the manner of protest going on, to slightly alter it so that it doesn't affect the citizens' right of movement https://t.co/JNX9hZwaMQ

    — ANI (@ANI) December 17, 2020 " class="align-text-top noRightClick twitterSection" data=" ">

"ಎಲ್ಲಿಯವರೆಗೆ ಆಸ್ತಿ-ಪಾಸ್ತಿಗೆ ಹಾನಿ ಮಾಡುವುದಿಲ್ಲವೋ, ಎಲ್ಲಿಯವರೆಗೆ ಜೀವಕ್ಕೆ ಅಪಾಯವನ್ನುಂಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಪ್ರತಿಭಟನೆ ಸಾಂವಿಧಾನಿಕವಾಗಿದೆ. ಚರ್ಚೆ ನಡೆಸದೆ ಪ್ರತಿಭಟನೆಯ ಉದ್ದೇಶವನ್ನು ಸಾಧಿಸಲಾಗುವುದಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರೈತರು ಮಾತನಾಡಬೇಕಾಗಿದೆ" ಎಂದು ನ್ಯಾಯಮೂರ್ತಿ ಬೊಬ್ಡೆ ಹೇಳಿದ್ದಾರೆ.

ರೈತರು ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ. ಇದರಲ್ಲಿ ನ್ಯಾಯಾಲಯು ಮಧ್ಯಪ್ರವೇಶಿಸುವುದಿಲ್ಲ. ಆದರೆ ಇದು ನಾಗರಿಕರ ಚಲನೆಯ ಹಕ್ಕಿನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಪ್ರತಿಭಟನೆ ನಡೆಸುತ್ತಿರುವ ವಿಧಾನವನ್ನು ಸ್ವಲ್ಪ ಬದಲಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.

"ನಾವು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯ ಬಗ್ಗೆ ಯೋಚಿಸುತ್ತಿದ್ದೇವೆ, ಅವರು ಎರಡೂ ಪಕ್ಷಗಳು ತಮ್ಮ ತಮ್ಮ ವಿಚಾರವನ್ನು ಸಮಿತಿಯ ಮುಂದಿಡಬಹುದು. ಆ ಸಮಿತಿ ಅದನ್ನು ಪರಿಶೀಲಿಸಿ ಅನುಸರಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲಿಯವರೆಗೂ ಪ್ರತಿಭಟನೆ ನಡೆಸಬಹುದು. ಆದರೆ ಈ ಪ್ರತಿಭಟನೆ ಜೀವಕ್ಕೆ ಅಪಾಯ ಮಾಡುವಂತಿಲ್ಲ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.