ETV Bharat / bharat

ಕೃಷಿ ಮಸೂದೆಯಿಂದ ರೈತರ ಜೀವನದಲ್ಲಿ ಕ್ರಾಂತಿಯಾಗುತ್ತೆ: ತೋಮರ್​ ಸಮರ್ಥನೆ - ಹೊಸ ಕೃಷಿ ಮಸೂದೆ 2020,

ಹೊಸ ಕೃಷಿ ಮಸೂದೆಯಿಂದಾಗಿ ರೈತರ ಜೀವನದಲ್ಲಿ ಹೊಸ ಕ್ರಾಂತಿಯ ಅಲೆಯುಂಟಾಗಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್​ ತೋಮರ್​ ಸಮರ್ಥಿಸಿಕೊಂಡಿದ್ದಾರೆ.

Narendra Singh Tomar, Narendra Singh Tomar news, Narendra Singh Tomar 2020 news, Narendra Singh Tomar farm bills news, ಕೃಷಿ ಮಸೂದೆಯಿಂದ ರೈತರ ಜೀವನದಲ್ಲಿ ಹೊಸ ಕ್ರಾಂತಿ, ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್​ ತೋಮರ್​, ನರೇಂದ್ರಸಿಂಗ್​ ತೋಮರ್ ಸುದ್ದಿ, ನರೇಂದ್ರಸಿಂಗ್​ ತೋಮರ್ ಕೃಷಿ ಮಸೂದೆ ಸುದ್ದಿ,  ಹೊಸ ಕೃಷಿ ಮಸೂದೆ, ಹೊಸ ಕೃಷಿ ಮಸೂದೆ 2020, ಹೊಸ ಕೃಷಿ ಮಸೂದೆ 2020 ಸುದ್ದಿ,
ಹೊಸ ಕೃಷಿ ಮಸೂದೆಯಿಂದ ರೈತರ ಜೀವನದಲ್ಲಿ ಹೊಸ ಕ್ರಾಂತಿ ಎಂದ ಕೇಂದ್ರ ಕೃಷಿ ಸಚಿವ
author img

By

Published : Sep 24, 2020, 4:13 PM IST

ನವದೆಹಲಿ: ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಹೊಸ ಕೃಷಿ ಮಸೂದೆ ವ್ಯಾಪಾರಿಗಳು ಮತ್ತು ರೈತರ ನಡುವಿನ ದೂರವನ್ನ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತೋಮರ್ ಹಲವಾರು ವಿಷಯಗಳನ್ನು ಬಹಿರಂಗಪಡಿಸಿದರು. ಹೊಸ ಕಾನೂನು ವ್ಯಾಪಾರಿಗಳು ಮತ್ತು ರೈತರಲ್ಲಿ ಜಾಗೃತಿ ಹೆಚ್ಚಿಸುತ್ತದೆ ಎಂದು ತೋಮರ್ ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಮಸೂದೆಯಿಂದ ರೈತರ ಜೀವನದಲ್ಲಿ ಹೊಸ ಕ್ರಾಂತಿ ಎಂದ ಕೇಂದ್ರ ಕೃಷಿ ಸಚಿವ

ಈ ಮಸೂದೆಯಿಂದಾಗಿ ವ್ಯಾಪಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಖರೀದಿಸಲು ರೈತರೊಂದಿಗೆ ಸಮಾಲೋಚಿಸಿತ್ತಾರೆ. ಬಳಿಕ ಬೆಲೆಯನ್ನು ನಿರ್ಧರಿಸುತ್ತಾರೆ. ಬೆಲೆ ನಿರ್ಧಾರದ ಬಳಿಕ ಬೆಳೆಗಳನ್ನು ತಮ್ಮದೇ ಲಾರಿಗಳಲ್ಲಿ ಕೊಂಡೊಯ್ಯುತ್ತಾರೆ. ಇದರಿಂದಾಗಿ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಎಂದರು.

ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೂ, ಅವರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುವುದಿಲ್ಲ. ಈಗ ನಾವು ಅವರ ಮನೆ ಮತ್ತು ಹೊಲಗಳಿಂದ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತಿದ್ದೇವೆ ಎಂದು ತೋಮರ್​ ಹೇಳಿದರು.

ಇಷ್ಟು ದಿನ ಕೃಷಿ ಮಾರುಕಟ್ಟೆಗಳಲ್ಲಿ ಹರಾಜು ಮೂಲಕ ಬೆಲೆಯನ್ನು ನಿಗದಿಪಡಿಸಲಾಗುತ್ತಿತ್ತು. ಆ ಬೆಲೆಗೆ ರೈತರು ತಮ್ಮ ಬೆಳೆಗಳನ್ನು ಮಾರಾಟಮಾಡಬೇಕಾಗಿತ್ತು. ಈಗ ರೈತರು ತಮ್ಮ ಬೆಳೆ ಎಲ್ಲಿಯಾದರೂ, ಯಾವಾಗ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಈ ಮಾರಾಟಗಳಿಗೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ತೆರಿಗೆಗಳಿಲ್ಲ ಎಂದು ತಿಳಿಸಿದರು.

ಕೃಷಿ ಮಾರುಕಟ್ಟೆಗಳು ರಾಜ್ಯ ಕಾನೂನುಗಳಿಗೆ ಒಳಪಟ್ಟಿರುತ್ತವೆ. ನಮ್ಮ ಕಾನೂನಿನ ಪ್ರಕಾರ ಮಾರುಕಟ್ಟೆಗಳ ಹೊರಗೆ ಯಾವುದೇ ತೆರಿಗೆಗಳಿಲ್ಲ. ರೈತರು ತಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಬಹುದು. ನಾವು ಪ್ರಸ್ತಾಪಿಸುವ ಕಾನೂನುಗಳು ರೈತರನ್ನು ಕೃಷಿ ಮಾರುಕಟ್ಟೆಗಳ ಸಂಕೋಲೆಗಳಿಂದ ಮುಕ್ತಗೊಳಿಸುತ್ತವೆ ಎಂದರು.

ಸಣ್ಣ ಪ್ರಮಾಣದ ರೈತರು ಸುಗ್ಗಿಯ ಆರಂಭದಲ್ಲಿ ತಮ್ಮ ಉತ್ಪನ್ನಗಳ ಬಗ್ಗೆ ಭರವಸೆ ನೀಡುತ್ತಾರೆ. ಈಗ ಅವರಿಗೆ ಅತ್ಯಂತ ದುಬಾರಿ ಬೆಳೆಗಳನ್ನು ಸಹ ಬೆಳೆಯಲು ಅವಕಾಶವಿದೆ. ಈ ಕೃಷಿ ಮಸೂದೆಗಳು ರೈತರ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತವೆ ಎಂದು ತಿಳಿಸಿದರು.

ಇನ್ನು ಕೃಷಿ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಳ್ಳಿಹಾಕಿದ್ದಾರೆ.

ರೈತರ ಬೆಳೆಗೆ ನೀಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆ ಈ ಮುಂಚೆಯೂ ಕಡ್ಡಾಯವಾಗಿರಲಿಲ್ಲ. ಈಗಲೂ ಅದು ಕಡ್ಡಾಯವಾಗಿಲ್ಲ. ಆದರೂ ಕೂಡ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಬದ್ಧವಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳ ವಿರೋಧದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಎಂಎಸ್​ಪಿಯನ್ನು ಕಾನೂನಿನ ಭಾಗವನ್ನಾಗಿ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ಧಾರೆ.

ದೇಶದ ಹಿತದ ದೃಷ್ಟಿಯಿಂದ ಸರ್ಕಾರ ಕೃಷಿ ಮಸೂದೆಗಳನ್ನ ಹೊರತಂದಿದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ತೋಮರ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.