ನವದೆಹಲಿ: ದೆಹಲಿಯ ಕಾಂಜವಾಲಾದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಇ-ಪಾಸ್‌ಗಳನ್ನು ವಿತರಿಸಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಡಿಸಿ ಕಚೇರಿಯಲ್ಲಿ ಕಂಪ್ಯೂಟರ್ ಲಾಗ್-ಇನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ನಕಲಿ ಇ-ಪಾಸ್‌ಗಳನ್ನು ನೀಡಲಾಗಿದೆ. ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಖಚಿತಪಡಿಸಿದ್ದು, ಕಾಂಜವಾಲಾ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಶಂಕಿತರು ಡಿಸಿ ಕಚೇರಿಯ ಕೆಲವು ಸಿಬ್ಬಂದಿ ಎಂಬ ಸಂಶಯ ಮೂಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಡಿಸಿ ಕಚೇರಿ ಅಧಿಕಾರಿಗಳು ಮೇ 22 ರಂದು ದಂಧೆಯ ಬಗ್ಗೆ ತಿಳಿದುಕೊಂಡಾಗ ಹೆಚ್ಚಿನ ಸಂಖ್ಯೆಯ ಅನುಮೋದನೆಗಳು ಮತ್ತು ಇ-ಪಾಸ್‌ಗಳನ್ನು ನೀಡಲಾಗಿದೆ. ಈ ನಕಲಿ ಇ-ಪಾಸ್‌ಗಳನ್ನು ಮೇ 16ರ ನಂತರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಕಚೇರಿಯ ಕೆಲ ಸಿಬ್ಬಂದಿಗೆ ಕಾಂಜವಾಲಾ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.