ಚಂಡೀಗಢ: ಕಳೆದೆರಡು ದಿನಗಳಿಂದ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಸಪ್ನಾ ಚೌಧರಿ. ಏಕಾಏಕಿ ಸುದ್ದಿ ಕೇಂದ್ರಕ್ಕೆ ಬಂದಿದ್ದಳು.
ಸಪ್ನಾಳ ರಾಜಕೀಯ ಪ್ರವೇಶ ಆಗಲಿದೆ ಎನ್ನುವುದು ದೇಶಮಟ್ಟದಲ್ಲಿ ಹರಿದಾಡಲು ಶುರುವಾದಂತೆ ಸ್ವತಃ ಸಪ್ನಾ ಚೌಧರಿ ಆ ಸುದ್ದಿಯನ್ನು ತಳ್ಳಿಹಾಕಿದ್ದಳು. ಕಳೆದ 48 ಗಂಟೆಯಲ್ಲಿ ಸುದ್ದಿಯ ಮುನ್ನೆಲೆಗೆ ಬಂದ ಸಪ್ನಾ ಯಾರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..
ಜೂನ್ 2018:
ಅದು 2018 ಜೂನ್, ಬಿಗ್ಬಾಸ್ ರಿಯಾಲಿಟಿ ಶೋ ನಲ್ಲಿ ಒಂದಷ್ಟು ಹೆಸರು ಗಳಿಸಿದ್ದ ಹರಿಯಾಣದ ರೋಹತಕ್ ಮೂಲದ ಸಪ್ನಾ ಚೌಧರಿ ಎನ್ನುವ ಬೆಡಗಿ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಳು.
ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಆ ಬಳಿಕ ನೇರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮೀಟ್ ಮಾಡಲು ಎಐಸಿಸಿ ಮುಖ್ಯ ಕಚೇರಿಗೆ ಬಂದಿದ್ದಳು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ವಿಚಾರಗಳಿಂದ ಪ್ರಭಾವಿತರಾಗಿ ಸಪ್ನಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಗುಲ್ಲೆದ್ದಿತ್ತು.
ರಾಗಾ ಭೇಟಿ ಬಳಿಕ ಮಾತನಾಡಿದ್ದ ಸಪ್ನಾ, ಇದು ಕೇವಲ ಸೌಹಾರ್ದಯುತ ಭೇಟಿ ಅಷ್ಟೇ, ಆದರೆ ತಕ್ಷಣವೇ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಳು.
ಅಷ್ಟಕ್ಕೂ ಸಪ್ನಾ ಚೌಧರಿ ಯಾರು..?
1990 ಸೆಪ್ಟೆಂಬರ್ 25ರಂದು ಮಧ್ಯಮ ವರ್ಗದಲ್ಲಿ ಜನಿಸಿದ ಸಪ್ನಾ ತನ್ನ ಹನ್ನೆರಡನೇ ವಯಸ್ಸಿಗೆ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಆ ಬಳಿಕ ಎಲ್ಲ ಕಷ್ಟವನ್ನು ಹಿಮ್ಮೆಟ್ಟಿ ಸಪ್ನಾ ತನ್ನ ಕನಸಿನ ಬೇಟೆ ಶುರುವಿಟ್ಟುಕೊಳ್ಳುತ್ತಾಳೆ. ನೃತ್ಯದಲ್ಲಿ ಸಾಧಿಸುವತ್ತ ಸಪ್ನಾ ಕಠಿಣ ಶ್ರಮವಹಿಸುತ್ತಾಳೆ.
ನೃತ್ಯಗಾರ್ತಿಯಾಗಿ ಆರಂಭಿಕ ದಿನಗಳಲ್ಲಿ ಸಪ್ನಾ ಬಹುತೇಕ ಎಲ್ಲ ಸಭೆ-ಸಮಾರಂಭಗಳಲ್ಲಿ ತನ್ನ ನೃತ್ಯ ಪ್ರದರ್ಶನ ನೀಡುತ್ತಿದ್ದಳು. ಇದೇ ವಿಚಾರದ ವಿವಾದಕ್ಕೂ ಕಾರಣವಾಗಿತ್ತು. ವೇದಿಕೆಯಲ್ಲಿ ನೃತ್ಯ ಮಾಡುತ್ತಾ ಹರಿಯಾಣದ ಸಂಸ್ಕೃತಿಯನ್ನು ಸಪ್ನಾ ಹಾಳು ಮಾಡಿದ್ದಾಳೆ ಎನ್ನುವ ಆರೋಪ ಆಕೆಯ ಮೇಲೆ ಬಂದಿತ್ತು.
ಸಪ್ನಾಳ ಮೊದಲ ಹಾಡು ಸಾಲಿಡ್ ಬಾಡಿ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಹಾಡಿನಿಂದ ತನ್ನ ರಾಜ್ಯ ಮಾತ್ರವಲ್ಲದೇ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯ ಪ್ರದೇಶಗಳಲ್ಲಿ ಸಪ್ನಾ ಮನೆ ಮಾತಾದಳು.
ವಿವಾದಕ್ಕೆ ಕಾರಣವಾಯ್ತು ಒಂದು ಹೇಳಿಕೆ:
ಯಶಸ್ಸು ಸಿಕ್ಕ ಸಂದರ್ಭದಲ್ಲೇ ಸಪ್ನಾ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಫೆಬ್ರವರಿ 2016ರಲ್ಲಿ ಸಪ್ನಾ ನೀಡಿದ್ದ ಹೇಳಿಕ ವಿರುದ್ಧ ದಲಿತನೊಬ್ಬ ಪೊಲೀಸ್ ಕಂಪ್ಲೇಂಟ್ ಕೂಡಾ ಕೊಟ್ಟಿದ್ದ. ಈ ಸಂಬಂಧ ಸಪ್ನಾ ಕ್ಷಮೆ ಯಾಚಿಸಿದರೂ ಸಾಮಾಜಿಕ ಜಾತಾಣದಲ್ಲಿ ಟ್ರೋಲಿಗರ ಆಹಾರವಾದಳು.
ಆತ್ಮಹತ್ಯೆಗೆ ಯತ್ನ:
ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಟ್ರೋಲಿಗರು ವಿವಿಧ ರೀತಿಯಲ್ಲಿ ಸಪ್ನಾಳನ್ನು ಟ್ರೋಲ್ ಮಾಡಲು ಆರಂಭಿಸಿದರು. ಇದೇ ವಿಚಾರ ಸಪ್ನಾಳನ್ನು ಆತ್ಮಹತ್ಯೆಗೆ ಮನಸ್ಸು ಮಾಡುವಂತೆ ಮಾಡಿತ್ತು. ಆದರೆ, ಅದೃಷ್ಟವಶಾತ್ ಆಕೆ ಬದುಕಿಳಿದಿದ್ದಳು.
ಆತ್ಮಹತ್ಯೆಯ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದು ಸಹಜವಾಗಿ ಧನಾತ್ಮಕವಾಗಿ ಆಕೆಯ ಕರಿಯರ್ ಮೇಲೆ ಪರಿಣಾಮ ಬೀರಿತ್ತು.
#WATCH Haryanavi singer & dancer Sapna Chaudhary says, "I have not joined the Congress party. The photograph with Priyanka Gandhi Vadra is old." #LokSabhaElections2019 pic.twitter.com/brcvaKOAIQ
— ANI (@ANI) March 24, 2019 " class="align-text-top noRightClick twitterSection" data="
">#WATCH Haryanavi singer & dancer Sapna Chaudhary says, "I have not joined the Congress party. The photograph with Priyanka Gandhi Vadra is old." #LokSabhaElections2019 pic.twitter.com/brcvaKOAIQ
— ANI (@ANI) March 24, 2019#WATCH Haryanavi singer & dancer Sapna Chaudhary says, "I have not joined the Congress party. The photograph with Priyanka Gandhi Vadra is old." #LokSabhaElections2019 pic.twitter.com/brcvaKOAIQ
— ANI (@ANI) March 24, 2019
ಬಿಗ್ಬಾಸ್ ಎಂಟ್ರಿ:
ಆತ್ಮಹತ್ಯೆ ಹಾಗೂ ನಂತರದ ಮೀಡಿಯಾ ಪ್ರಚಾರ ಬಿಗ್ಬಾಸ್ ಶೋಗೆ ಎಂಟ್ರಿ ನೀಡಿತ್ತು. 11ನೇ ಆವೃತ್ತಿಯ ಹಿಂದಿ ಬಿಗ್ಬಾಸ್ಗೆ ಸಪ್ನಾ ಎಂಟ್ರಿ ನೀಡಿದ್ದಳು . ಕೆಲ ವಾರಗಳಲ್ಲಿ ಬಿಗ್ಬಾಸ್ ಶೋನಿಂದ ಎಲಿಮಿನೇಟ್ ಆಗಿದ್ದಳು. ಆದರೆ ಈ ಶೋ ಆಕೆಯ ಬದುಕನ್ನು ಬದಲಿಸಿಬಿಟ್ಟಿತ್ತು. ಶೋ ಬಳಿಕ ಸಾಂಪ್ರದಾಯಿಕ ಉಡುಗೆಗಳಿಗೆ ಬಾಯ್ ಬಾಯ್ ಹೇಳಿ ಮಾಡರ್ನ್ ಡ್ರೆಸ್ ತೊಡಲು ಆರಂಭಿಸಿದ್ದಳು.
ಈಗ ಸಪ್ನಾ ನೃತ್ಯ ಮಾಡಲು ವೇದಿಕೆ ಏರಿದರೆ ಲಕ್ಷಾಂತರ ಮಂದಿ ಅಭಿಮಾನಿಗಳು ಸೇರುತ್ತಾರೆ. ಅದು ಎಷ್ಟಿರುತ್ತದೆ ಎಂದರೆ ಜನ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುಬೇಕಾಗುತ್ತದೆ.