ನವದೆಹಲಿ: ಮುಂದಿನ ವರ್ಷಗಳಲ್ಲಿ ಅಸ್ಸೋಂ ಚುನಾವಣೆಯಲ್ಲೂ ಬಿಹಾರ ಚುನಾವಣೆಯ ಅಂಶಗಳು ಪರಿಣಾಮ ಬೀರುತ್ತವೆ ಎಂದು ರಾಜಕೀಯ ವಿಶ್ಲೇಷಕ ಸುಬಿಮಲ್ ಭಟ್ಟಾಚಾರ್ಯ ಹೇಳಿದ್ದಾರೆ.
ಕೋವಿಡ್ -19 ನಿರ್ವಹಣೆ, ಕಾರ್ಮಿಕರ ವಲಸೆ, ಸರಿಯಾದ ಆರೋಗ್ಯದ ಲಭ್ಯತೆ ಮುಂತಾದ ವಿಷಯಗಳು ರಾಜ್ಯ ಚುನಾವಣೆಯಲ್ಲಿ ಖಂಡಿತವಾಗಿಯೂ ದೊಡ್ಡ ಪಾತ್ರವನ್ನು ವಹಿಸುತ್ತವೆ. ಬಿಹಾರ ಚುನಾವಣೆಯ ನಿರ್ಗಮನ ಸಮೀಕ್ಷೆಯಲ್ಲಿ ಎನ್‌ಡಿಎಗಿಂತ ಆರ್‌ಜೆಡಿ ಮುನ್ನಡೆ ಸಾಧಿಸಿದೆ ಎಂದರು.
ನಿಸ್ಸಂದೇಹವಾಗಿ, ಮುಂಬರುವ ಚುನಾವಣೆಯಲ್ಲಿ ಕೋವಿಡ್ ಒಳಗೊಂಡ ವಿವಿಧ ವಿಷಯಗಳು ಅದರ ಪಾತ್ರವನ್ನು ವಹಿಸುತ್ತವೆ. ಇದು ಬಿಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವಂತೆ, ಮುಂಬರುವ ಅಸ್ಸೋಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಉಪಕ್ರಮಗಳು ಅಸ್ಸೋಂ ಕೈಗೊಳ್ಳುವುದರೊಂದಿಗೆ, ಸರ್ಬಾನಂದ ಸೋನೊವಾಲ್ ನೇತೃತ್ವದ ಅಸ್ಸೋಂ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದೆ.
ಮುಂಬರುವ ಚುನಾವಣೆಯಲ್ಲಿ ಎನ್‌ಆರ್‌ಸಿ, ಸಿಎಎ ಮುಂತಾದ ಅಂಶಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ಅಸೆಂಬ್ಲಿ ಚುನಾವಣೆಗಳು ಕೆಲವು ಹೊಸ ರಾಜಕೀಯ ಪಕ್ಷಗಳ ಉಗಮಕ್ಕೂ ಸಾಕ್ಷಿಯಾಗಬಹುದು.