ಫೇಸ್ಬುಕ್ ತನ್ನದೇ ಆದ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದ್ದು, ಇದು ಶತಕೋಟಿ ಬಳಕೆದಾರರಿಗೆ ತಮ್ಮ ಸ್ಮಾರ್ಟ್ ಫೋನ್ ಗಳಿಂದ ಲೈವ್ ಗೇಮ್ ವೀಕ್ಷಿಸಲು ಮತ್ತು ಸ್ಟ್ರೀಮ್ ಮಾಡಲು ಅವಕಾಶ ನೀಡಲಿದೆ.
ಫೇಸ್ಬುಕ್ ಗೇಮಿಂಗ್ ಅಪ್ಲಿಕೇಶನ್ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲಿ ಲಭ್ಯವಿರುತ್ತದೆ. ಇದು ಬಳಕೆದಾರರಿಗೆ ಕೆಲವೇ ಬಟನ್ಗಳನ್ನು ಒತ್ತುವ ಮೂಲಕ ಆಟವಾಡುವ ಅವಕಾಶ ನೀಡುತ್ತದೆ.
"ಸಾಮಾನ್ಯವಾಗಿ ಗೇಮಿಂಗ್‌ನಲ್ಲಿ ಹೂಡಿಕೆ ಮಾಡುವುದು ನಮಗೆ ಆದ್ಯತೆಯಾಗಿದೆ. ಏಕೆಂದರೆ, ಗೇಮಿಂಗ್ ಕೇವಲ ನಿಷ್ಕ್ರಿಯ ಬಳಕೆಯ ಒಂದು ರೂಪವಲ್ಲ. ಆದರೆ, ಸಂವಾದಾತ್ಮಕ ಮತ್ತು ಜನರನ್ನು ಒಟ್ಟಿಗೆ ಸೇರಿಸುವ ಮನರಂಜನೆಯ ರೂಪವಾಗಿದೆ" ಎಂದು ಫೇಸ್‌ಬುಕ್ ಗೇಮಿಂಗ್ ಆ್ಯಪ್‌ನ ಮುಖ್ಯಸ್ಥರಾದ ಫಿಡ್ಜಿ ಸಿಮೋ ಉಲ್ಲೇಖಿಸಿದ್ದಾರೆ.