ETV Bharat / bharat

ಬಿಜೆಪಿ ಜೊತೆಗೆ ಫೇಸ್​ಬುಕ್​ ನಂಟು; ಕಾಂಗ್ರೆಸ್​ ಪತ್ರಕ್ಕೆ ಎಫ್​ಬಿ ಪ್ರತಿಕ್ರಿಯೆ! - ಬಿಜೆಪಿ ಮತ್ತು ಫೇಸ್​ಬುಕ್​

ಬಿಜೆಪಿ ಜೊತೆಗೆ ಫೇಸ್​ಬುಕ್​ಗೆ ನಂಟಿದೆ. ದೇಶದಲ್ಲಿ ಈ ಸಾಮಾಜಿಕ ಜಾಲತಾಣವನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್​ ಕೆಲ ದಿನಗಳ ಹಿಂದೆಯೇ ಆರೋಪಿಸಿತ್ತು. ಆ ಬಳಿಕ ಭಾರತದಲ್ಲಿನ ಫೇಸ್​ಬುಕ್​ ಕಾರ್ಯಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಫೇಸ್​ಬುಕ್​ಗೆ ಕಾಂಗ್ರೆಸ್​ ಪತ್ರ ಬರೆದಿತ್ತು. ಇದಕ್ಕೆ ಎಫ್​ಬಿ ಮುಖ್ಯಸ್ಥ ಮಾರ್ಕ್​ ಜುಕರ್​ ಬರ್ಗ್​ ಪ್ರತಿಕ್ರಿಯೆ ನೀಡಿದ್ದಾರೆ.

mark zuckerberg
ಮಾರ್ಕ್​ ಜುಕರ್​ ಬರ್ಗ್
author img

By

Published : Sep 3, 2020, 8:26 PM IST

Updated : Sep 3, 2020, 10:49 PM IST

ನವದೆಹಲಿ: ಭಾರತದಲ್ಲಿ ತನ್ನ ಕಾರ್ಯಾಚರಣೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಬರೆದ ಪತ್ರಕ್ಕೆ ಫೇಸ್‌ಬುಕ್ ಪ್ರಧಾನ ಕಚೇರಿಯಿಂದ ಪ್ರತಿಕ್ರಿಯೆ ಬಂದಿದೆ.

ಈ ವಿಚಾರದ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ಗೆ ಭರವಸೆ ನೀಡಿರುವ ಫೇಸ್​ಬುಕ್​, ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಅಲ್ಲದೆ ಎಲ್ಲಾ ರೂಪದಲ್ಲೂ ದ್ವೇಷ ಮತ್ತು ಧರ್ಮಾಂಧತೆಯನ್ನು ಖಂಡಿಸಲಾಗುವುದು ಎಂದು ಖಚಿತಪಡಿಸಿದೆ.

ಸೆಪ್ಟೆಂಬರ್ 1ರ ಪತ್ರದಲ್ಲಿ ತಿಳಿಸಿರುವ ಫೇಸ್‌ಬುಕ್, ನಾವು ಯಾವುದೇ ಪಕ್ಷದ ಪರವಾಗಿಲ್ಲ. ನಮ್ಮ ಆ್ಯಪ್, ಜನರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ತಾಣವಾಗಿ ಉಳಿಯುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಾವು ಪಕ್ಷಪಾತದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ದ್ವೇಷ ಮತ್ತು ಧರ್ಮಾಂಧತೆಯನ್ನು ಖಂಡಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಫೇಸ್​ಬುಕ್​ ತಿಳಿಸಿದೆ.

facebook
ಪತ್ರ

ಕಳೆದ ಕೆಲವು ವಾರಗಳ ಹಿಂದೆ, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನಗಳಲ್ಲಿ, ಮೋದಿ ಹಾಗೂ ಬಿಜೆಪಿಯ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಫೇಸ್‌ಬುಕ್ ಮತ್ತು ವಾಟ್ಸಾಪ್​ಅನ್ನು ಬಳಸಲಾಗಿದೆ. ಇದು ಭಾರತದಲ್ಲಿ ದ್ವೇಷ ಮತ್ತು ಅಸಮಾನತೆಯನ್ನು ಇನ್ನಷ್ಟು ಹರಡುತ್ತದೆ ಎಂಬ ಲೇಖನಗಳು ಪ್ರಕಟವಾಗಿತ್ತು. ಇನ್ನೊಂದೆಡೆ 2014 ರ ಲೋಕಸಭಾ ಚುನಾವಣೆಗೂ ಮುಂಚೆಯೇ ಅಂಖಿ ದಾಸ್ ಸೇರಿದಂತೆ ಫೇಸ್‌ಬುಕ್ ಇಂಡಿಯಾದ ಉನ್ನತ ಅಧಿಕಾರಿಗಳು ಬಿಜೆಪಿಯೊಂದಿಗೆ ನಂಟು ಹೊಂದಿದ್ದರು ಎಂದು ಈ ಲೇಖನಗಳಲ್ಲಿ ಬರೆಯಲಾಗಿತ್ತು.

ಈ ಬಗ್ಗೆ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಫೇಸ್​ಬುಕ್​ ಮುಖ್ಯಸ್ಥ ಮಾರ್ಕ್​ ಜುಕರ್​ ಬರ್ಗ್​ಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಫೇಸ್​ಬುಕ್​ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.

Last Updated : Sep 3, 2020, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.