ಕೈಗಳಿಂದ ಕಣ್ಣುಗಳನ್ನು ಉಜ್ಜಿಕೊಳ್ಳುವುದನ್ನು ನಿಯಂತ್ರಿಸಿ, ಕಣ್ಣುಗಳ ರಕ್ಷಣೆಗೆ ಕನ್ನಡಕ ಧರಿಸಿ. ನೀರಿನಾಂಶ ಕಡಿಮೆಯಾಗೋದು ಕಣ್ಣುಗಳನ್ನು ಉಜ್ಜಿಕೊಳ್ಳೋಕೆ ಮೂಲ ಕಾರಣವಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಲೂಬ್ರಿಕೆಂಟ್ಗಳನ್ನು ನಿಯಮಿತವಾಗಿ ಉಪಯೋಗಿಸಿ.
ಕಣ್ಣುಗಳನ್ನು ರಕ್ಷಿಸಿಕೊಳ್ಳಲು 20-20-20 ನಿಯಮವನ್ನು ಪಾಲಿಸಿ. ಅಂದರೆ ಪ್ರತಿ 20 ನಿಮಿಷಕ್ಕೊಮ್ಮೆ ಕಂಗಳಿಗೆ ವಿಶ್ರಾಂತಿ ನೀಡಿ. ಈ ವೇಳೆ 20 ಅಡಿಗಳಿಂದ ದೂರಕ್ಕೆ ದೃಷ್ಟಿ ಹಾಯಿಸಿ. ಜೊತೆಗೆ 20 ಬಾರಿ ಕಣ್ಣು ಮಿಟುಕಿಸುವುದರಿಂದ ಕಣ್ಣಿಗೆ ಆಯಾಸವಾಗದಂತೆ ತಡೆಯಬಹುದು. ಇದರಿಂದಾಗಿ ಕಣ್ಣನ್ನು ಕೈಗಳಿಂದ ಉಜ್ಜಿಕೊಳ್ಳುವ ಪ್ರಮೇಯವೂ ತಪ್ಪುತ್ತದೆ.
ಒಮೆಗಾ-3 ಹೆಚ್ಚಾಗಿರುವ ಕಾಳುಗಳು, ಸೋಯಾಬಿನ್, ಆಹಾರಗಳನ್ನು ಸೇವಿಸಿ. ಇದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ.
ಕಂಗಳ ಆರೋಗ್ಯ ಕೂಡಾ ಕೊರೊನಾ ಸೋಂಕನ್ನು ದೃಢಪಡಿಸುತ್ತದೆ ಎಂದು ಹೇಳಲಾಗುತ್ತದೆ. ಕೊರೊನಾ ಸೋಂಕಿತರ ಕಂಗಳು ಭಾಗಶಃ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣದಲ್ಲಿರುತ್ತವೆ. ಈ ಲಕ್ಷಣ ಇರುವ ಯಾರಾದರೂ ಓರ್ವ ರೋಗಿ ಜ್ವರ, ನೆಗಡಿ ಹೊಂದಿದ್ದರೆ ವೈದ್ಯರನ್ನು ಭೇಟಿಯಾಗಿ ಸೋಂಕಿನ ಪರೀಕ್ಷೆಯನ್ನು ಪಾಲ್ಗೊಳ್ಳವುದು ಅನಿವಾರ್ಯ ಹಾಗೂ ಉತ್ತಮ ನಡೆ.
ಇಂತಹ ವ್ಯಕ್ತಿಗಳಿಂದ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಿಬ್ಬಂದಿ ಮುಂಜಾಗ್ರತೆ ವಹಿಸಿಕೊಳ್ಳೋದು ಉತ್ತಮ. ಅಗತ್ಯಕ್ರಮಗಳನ್ನು ಕೈಗೊಂಡು ಚಿಕಿತ್ಸೆ ನೀಡುವುದು ಅತ್ಯವಶ್ಯವಾಗಿರುತ್ತದೆ.
ವ್ಯಕ್ತಿಯೊಬ್ಬ ತನ್ನ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ನಿಯಮಿತವಾಗಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸ್ವಚ್ಛಗೊಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕೊರೊನಾ ಸೋಂಕಿನಿಂದ ವ್ಯಕ್ತಿ ಪಾರಾಗಬಹುದು.
ಕಣ್ಣುಗಳು ನಮ್ಮ ದೇಹದಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಂಗ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮುಂತಾದ ಸಾಧನಗಳ ಕಾರಣದಿಂದ ಕಣ್ಣುಗಳ ಮೇಲೆ ಅತಿ ಹೆಚ್ಚು ಒತ್ತಡ ಬೀಳುತ್ತಿದೆ. ಕಂಗಳ ಆರೋಗ್ಯಕ್ಕೆ ಇದೂ ಕೂಡಾ ಮಾರಕ ಎಂದು ಡಾ. ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.