ETV Bharat / bharat

ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಶಿಕ್ಷೆ, 5 ಲಕ್ಷ ರೂ. ದಂಡ... ಹೊಸ ಕಾನೂನು ಏನು ಹೇಳುತ್ತೆ? - ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188

ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಗೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳ ದಂಡ ವಿಧಿಸುವ ಹೊಸ ಕಾನೂನಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ವೈದ್ಯರು ಮತ್ತು ಇತರ ಆರೋಗ್ಯ ಅಧಿಕಾರಿಗಳ ವಿರುದ್ಧ ಹೆಚ್ಚುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

All you need to know about the new law to protect health workers
ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಕೇಂದ್ರದ ನೂತನ ಕಾನೂನು
author img

By

Published : Apr 24, 2020, 10:27 AM IST

ಹೈದರಾಬಾದ್: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವವರು ವೈದ್ಯರು, ದಾದಿಯರು. ಆದರೆ,ಇತ್ತೀಚಿನ ದಿನಗಳಲ್ಲಿ ಇವರಿಗೆ ಅಭದ್ರತೆ ಉಂಟಾಗಿದೆ. ಕಾರಣ,ಹಲವಾರು ಕಡೆ ಇವರ ಮೇಲೆ ಹಲ್ಲೆಯ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಸರ್ಕಾರ ನೂತನ ಕಾನೂನನ್ನ ಜಾರಿಗೆ ತಂದಿದೆ.

ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಬುಧವಾರ ಹೊಸ ಕಾನೂನನ್ನು ಅಂಗೀಕರಿಸಿದೆ. ಇವರಿಗೆ ಏನಾದರು ತೊಂದರೆ ಉಂಟು ಮಾಡಿದರೆ, ಏಳು ವರ್ಷಗಳ ಗರಿಷ್ಠ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ, ತ್ವರಿತ ತನಿಖೆ, ತ್ವರಿತ ವಿಚಾರಣೆಯನ್ನು ಕೂಡ ಈ ಕಾನೂನಿನ ಅನ್ವಯ ಮಾಡಲಾಗುತ್ತದೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ವಿರುದ್ಧ ಹೆಚ್ಚುತ್ತಿರುವ ದಾಳಿಗಳು, ಕಿರುಕುಳ ಮತ್ತು ಸಾಮಾಜಿಕ ತಾರತಮ್ಯವನ್ನು ತಡೆಯಲು ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲಾಗಿದೆ.

ಕಠಿಣ ಕಾನೂನಿನ ಅವಶ್ಯಕತೆ ಏನಿದೆ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಈ ಹಿಂದೆ ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಈ ಶಿಕ್ಷೆಯ ಪ್ರಮಾಣ ಕಡಿಮೆ ಇದ್ದಿದ್ದರಿಂದ ಯಾರೂ ಕೂಡ ಹೆದರುತ್ತಿರಲಿಲ್ಲ, ಈ ಕಾಯ್ದೆ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿ ಮತ್ತು ಕಿರುಕುಳವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಪರಿಗಣಿಸಲಾಗಿದೆ.

ಐಪಿಸಿಯ 188 ನೇ ವಿಭಾಗ ಏನು ಹೇಳುತ್ತದೆ?

ಐಪಿಸಿಯ ಸೆಕ್ಷನ್ 188 ಒಂದು ತಿಂಗಳು ಜೈಲು ಶಿಕ್ಷೆ ಮತ್ತು 200 ರೂ ದಂಡ. ಇದರಿಂದ ಯಾವೊಬ್ಬ ವ್ಯಕ್ತಿಯೂ ಹೆದರುತ್ತಿರಲಿಲ್ಲ. ಅದಾಗಿಯೂ ಈ ಶಿಕ್ಷೆಯ ಪ್ರಮಾಣದಲ್ಲಿ ಬದಲಾವಣೆ ಮಾಡಿ ಆರೋಗ್ಯ ಸೇವಕರಿಗೆ ಏನಾದರೂ ಆಪಾಯ ಉಂಟು ಮಾಡಿದ್ದೇ ಆದಲ್ಲಿ, ಆರು ತಿಂಗಳು ಜೈಲು ಶಿಕ್ಷೆ ಹಾಗೂ 1,000 ದಂಡ ಅಥವಾ ಇವೆರಡನ್ನೂ ವಿಧಿಸಲಾಗುತ್ತಿತ್ತು. ಆದರೂ ಇದು ವೈದ್ಯರ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಯನ್ನು ತಡೆಯಲು ವಿಫಲವಾಗಿದೆ.

ಈ ಹಿನ್ನೆಲೆ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಯನ್ನು ತಡೆಯುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು 1897 ರ 123 ವರ್ಷಗಳ ಹಳೆಯ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಯಿತು.

ಹೊಸ ಕಾನೂನಿನಲ್ಲಿ ಏನಿದೆ?

ಹೊಸ ಕಾನೂನಿನ ಸೆಕ್ಷನ್ 3 ರ ಅನ್ವಯ ದೈಹಿಕ ಹಿಂಸಾಚಾರ ಎಂದು ಪರಿಗಣಿಸಿದೆ. ಇದಕ್ಕೆ ವ್ಯಾಪಕವಾದ ಅರ್ಥವನ್ನೂ ನೀಡುತ್ತದೆ. ಆರೋಗ್ಯ ಸೇವಾ ಸಿಬ್ಬಂದಿಯ ಜೀವನ ಅಥವಾ ಕೆಲಸದ ಸ್ಥಿತಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಹಾಗೂ ಹೊರಗಿನ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಯಾವುದೇ ರೀತಿಯ ಹಾನಿ ಅಂದರೆ, ಹಲ್ಲೆ, ನೋವು ಮಾಡುವುದು, ಬೆದರಿಕೆ ಹಾಕುವುದನ್ನು ಈ ಕಾಯಿದೆ ತಡೆಯುತ್ತದೆ.

ಆರೋಗ್ಯ ಕಾರ್ಯಕರ್ತರಿಗೆ ಹಿಂಸೆ ಅಥವಾ ಕಿರುಕುಳ ಮಾತ್ರವಲ್ಲ, ಯಾರಾದರೂ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಪ್ರಯತ್ನಿಸಿದರೂ ಈ ಕಾನೂನಿನ ಪ್ರಕಾರ ಶಿಕ್ಷೆ ನೀಡಬಹುದಾಗಿದೆ.

ಆರೋಗ್ಯ ಕಾರ್ಯಕರ್ತರ ಆಸ್ತಿ ಪರಿಗಣನೆ:

ಈ ಕಾನೂನು ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸೆ ಅಥವಾ ಕಿರುಕುಳವನ್ನು ಒಳಗೊಂಡಂತೆ ಅವರ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ್ದಲ್ಲಿ ಈ ಕಾನೂನು ಅನ್ವಯವಾಗುತ್ತದೆ. ಕ್ಲಿನಿಕ್​ ಹಾಗೂ ದಾಖಲೆಗಳನ್ನು ಹಾನಿಮಾಡಿದರೆ ಕಾನೂನು ರಿತ್ಯಾ ಶಿಕ್ಷೆ ನೀಡಬಹುದಾಗಿದೆ.

ಹೊಸ ಕಾನೂನಿನಡಿಯಲ್ಲಿ ಆರೋಗ್ಯ ಸಿಬ್ಬಂದಿ ಯಾರು?

ಕೇಂದ್ರ ಸರ್ಕಾರವು ಹೊಸ ಕಾನೂನಿನಲ್ಲಿ ಆರೋಗ್ಯ ಕಾರ್ಯಕರ್ತರ ಯಾರು ಎಂಬುದಕ್ಕೆ ಉದಾರ ಅರ್ಥವನ್ನು ಹೇಳಿದೆ. ರೋಗಿಯೊಂದಿಗೆ ಸಂಪರ್ಕಕ್ಕೆ ಬರಬಹುದಾದ ಯಾವುದೇ ಆರೋಗ್ಯ ಸೇವಾ ಸಿಬ್ಬಂದಿಯನ್ನು ಕಾನೂನು ಒಳಗೊಳ್ಳುತ್ತದೆ ಮತ್ತು ಸಾಂಕ್ರಾಮಿಕ ಸಂಬಂಧಿತ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ತನ್ನ ಕರ್ತವ್ಯಗಳನ್ನು ನಿರ್ವಹಿಸುವವರನ್ನು ಇದು ಒಳಗೊಳ್ಳುತ್ತದೆ. ಅಂದರೆ, ಖಾಸಗಿ ಅಥವಾ ಸಾರ್ವಜನಿಕ ವಲಯದ ಯಾವುದೇ ಆರೋಗ್ಯ ಕಾರ್ಯಕರ್ತರು, ವೈದ್ಯರು, ದಾದಿಯರು, ಅರೆವೈದ್ಯರು, ಸಮುದಾಯ ಆರೋಗ್ಯ ಕಾರ್ಯಕರ್ತರಾದ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತರು ಮತ್ತು ಇತರರು.

ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಯಾವುದೇ ವರ್ಗದ ವ್ಯಕ್ತಿಗಳನ್ನು ಆರೋಗ್ಯ ಕಾರ್ಯಕರ್ತರಾಗಿ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡಿದೆ.

ಹೊಸ ಸಾಂಕ್ರಾಮಿಕ ಕಾನೂನಿನಡಿಯಲ್ಲಿ ಆರೋಗ್ಯ ಕಾರ್ಯಕರ್ತರ ಆಸ್ತಿಗೆ ಆಗುವ ಹಾನಿಗೆ ಅಪರಾಧಿಗಳಿಂದ ಪರಿಹಾರವನ್ನು ಮರುಪಡೆಯುವ ಆದೇಶವನ್ನು ನೀಡುತ್ತದೆ. ಆಸ್ತಿ ಎಂದರೆ 2010 ರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾದ ಕ್ಲಿನಿಕ್​ ಸ್ಥಾಪನೆ ಅಥವಾ ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳನ್ನು ಪ್ರತ್ಯೇಕಿಸಲು ಮತ್ತು ಪ್ರತ್ಯೇಕಿಸಲು ಬಳಸುವ ಯಾವುದೇ ವ್ಯವಸ್ಥೆ. ಮೊಬೈಲ್ ವೈದ್ಯಕೀಯ ಘಟಕಗಳು ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಒದಗಿಸುವ ಸೌಲಭ್ಯಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.