ಡೆಹ್ರಾಡೂನ್: ಉಭಯ ದೇಶದ ಕಮಾಂಡರ್ಗಳ ಜೊತೆ ಉನ್ನತ ಹಾಗೂ ಸ್ಥಳೀಯ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿರಂತರ ಮಾತುಕತೆಗಳ ಮೂಲಕ ನಮ್ಮ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಭೂಸೇನಾ ಮುಖ್ಯಸ್ಥ ಎಂ.ಎಂ.ನರವನೆ ತಿಳಿಸಿದ್ದಾರೆ.
-
I would like to assure everyone that entire situation along our borders with China is under control. We're having a series of talks which started with Corps Commander level talks&has been followed up with meetings at local level b/w Commanders of equivalent ranks: Army Chief Gen pic.twitter.com/Pl3x1ICmfC
— ANI (@ANI) June 13, 2020 " class="align-text-top noRightClick twitterSection" data="
">I would like to assure everyone that entire situation along our borders with China is under control. We're having a series of talks which started with Corps Commander level talks&has been followed up with meetings at local level b/w Commanders of equivalent ranks: Army Chief Gen pic.twitter.com/Pl3x1ICmfC
— ANI (@ANI) June 13, 2020I would like to assure everyone that entire situation along our borders with China is under control. We're having a series of talks which started with Corps Commander level talks&has been followed up with meetings at local level b/w Commanders of equivalent ranks: Army Chief Gen pic.twitter.com/Pl3x1ICmfC
— ANI (@ANI) June 13, 2020
ಉತ್ತರಾಖಂಡ್ನ ಡೆಹ್ರಾಡೂನ್‌ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ತಮ್ಮ 2020 ರ ಬ್ಯಾಚ್‌ಗಾಗಿ ಇಂದು ಪಾಸಿಂಗ್ ಔಟ್ ಪರೇಡ್ ಕಾರ್ಯಕ್ರಮ ನಡೆಸಿತು. ಈ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನರವನೆ, ಭಾರತ-ಚೀನಾ ಹಾಗೂ ಇಂಡೋ-ನೇಪಾಳ ಗಡಿ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದರು.
ನೇಪಾಳದೊಂದಿಗೆ ನಮಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕವಾಗಿ ಪ್ರಬಲವಾದ ಸಂಬಂಧವಿದೆ. ಎರಡು ದೇಶಗಳ ನಡುವಿನ ಜನ ಸಂಪರ್ಕ ಕೂಡ ಗಟ್ಟಿಯಾಗಿದೆ. ಈ ಸಂಬಂಧ ಯಾವಾಗಲೂ ಹೀಗೇ ಇರುತ್ತದೆ, ಭವಿಷ್ಯದಲ್ಲಿ ಸದೃಢವಾಗಿರುತ್ತದೆ ಎಂದು ನರವನೆ ಭರವಸೆ ನೀಡಿದರು.