ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ವಿಂಡೀಸ್ ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ವಿಸ್ಡನ್ ಟ್ರೋಫಿ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1ರ ಅಂತರದಿಂದ ಕೈವಶ ಮಾಡಿಕೊಂಡಿದೆ.
ಇಂದು ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 269 ರನ್ಗಳ ಜಯ ಸಾಧಿಸಿದ್ದು, ಪಂದ್ಯದಲ್ಲಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕೇವಲ 67 ರನ್ ನೀಡಿ ಬರೋಬ್ಬರಿ 10 ವಿಕೆಟ್ ಪಡೆದು ಮಿಂಚಿದರು.
ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳಿಸಿದರೆ, ವೆಸ್ಟ್ ಇಂಡೀಸ್ ಕೇವಲ 197 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ನಲ್ಲಿ 226 ರನ್ಗಳಿಕೆ ಮಾಡಿ ಇಂಗ್ಲೆಂಡ್ ತಂಡ ಡಿಕ್ಲೇರ್ ಮಾಡಿಕೊಂಡಿತು. ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ ತಂಡ ಕೇವಲ 129ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್ಗಳ ಸೋಲು ಕಾಣುವಂತಾಯಿತು.
-
🏴 2️⃣–1️⃣ 🌴
— ICC (@ICC) July 28, 2020 " class="align-text-top noRightClick twitterSection" data="
England win the Wisden Trophy in its final outing 🏆 #ENGvWI pic.twitter.com/LSbPiNmMfk
">🏴 2️⃣–1️⃣ 🌴
— ICC (@ICC) July 28, 2020
England win the Wisden Trophy in its final outing 🏆 #ENGvWI pic.twitter.com/LSbPiNmMfk🏴 2️⃣–1️⃣ 🌴
— ICC (@ICC) July 28, 2020
England win the Wisden Trophy in its final outing 🏆 #ENGvWI pic.twitter.com/LSbPiNmMfk
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಕೆರಿಬಿಯನ್ ತಂಡ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಭರ್ಜರಿ ಕಮ್ಬ್ಯಾಮ್ ಮಾಡಿದ ರೂಟ್ ಪಡೆ ವಿಸ್ಡನ್ ಟ್ರೋಫಿಗೆ ಮುತ್ತಿಕ್ಕಿದೆ. ನಿನ್ನೆ ಮಳೆಯಾರ್ಭಟ ಜೋರಾಗಿದ್ದ ಕಾರಣ ಇಂದು ಇಂಗ್ಲೆಂಡ್ ತಂಡ ಗೆಲುವಿಗೆ 8 ವಿಕೆಟ್ಗಳ ಅವಶ್ಯಕತೆ ಇತ್ತು. ವೇಗಿ ಕ್ರಿಸ್ ವೋಕ್ಸ್ 5 ವಿಕೆಟ್ ಹಾಗೂ ಬ್ರಾಡ್ 4 ವಿಕೆಟ್ ಪಡೆದುಕೊಂಡು ಮಿಂಚಿದರು.
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 31ರನ್ ನೀಡಿ 6 ವಿಕೆಟ್ ಪಡೆದುಕೊಂಡಿದ್ದ ಬ್ರಾಡ್ ಎರಡನೇ ಇನ್ನಿಂಗ್ಸ್ನಲ್ಲೂ 36 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದರ ಜೊತೆಗೆ ಇದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 500ನೇ ವಿಕೆಟ್ ಸಂಪಾದನೆ ಮಾಡಿ ವಿಶಿಷ್ಟ ಸಾಧನೆ ಮಾಡಿದರು.
ಸಂಕ್ಷಿಪ್ತ ಸ್ಕೋರ್ ವಿವರ:
ಇಂಗ್ಲೆಂಡ್ ತಂಡ: ಮೊದಲ ಇನ್ನಿಂಗ್ಸ್ 369, ಎರಡನೇ ಇನ್ನಿಂಗ್ಸ್ 226/2 ಡಿಕ್ಲೇರ್
ವೆಸ್ಟ್ ಇಂಡೀಸ್: ಮೊದಲ ಇನ್ನಿಂಗ್ಸ್ 197 ಹಾಗೂ ಎರಡನೇ ಇನ್ನಿಂಗ್ಸ್ 129/10
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ಗೆ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.