ಫಿರೋಜ್‌ಪುರ: ಸಟ್ಲೆಜ್ ನದಿಯ ನೀರನ್ನು ಪಾಕ್ ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿಟ್ಟಿರುವ ಕಾರಣ ಭಾರತ-ಪಾಕ್ ಗಡಿಯಲ್ಲಿರುವ ಪಂಜಾಬ್ನ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉದ್ಭವವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ 15-20 ಗ್ರಾಮದೊಳಗೆ ನೀರು ನುಗ್ಗದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಒಡ್ಡುಗಳು ಒಡೆದು ಹೋಗಿ, ಭಾರತದ ಗಡಿ ಪ್ರದೇಶದಲ್ಲಿನ ಹೊಲಗಳಿಗೆ ನೀರು ಹೋಗಿದೆ. ಈಗಾಗಲೇ ಗಡಿ ಗ್ರಾಮ ಟೆಂಡಿವಾಲ್ದಲ್ಲಿ ನೀರು ನುಗ್ಗಿ ಅನೇಕ ಮನೆಗಳು ಜವಾವೃತಗೊಂಡಿದ್ದು, 200ಕ್ಕೂ ಹೆಚ್ಚು ಜನರನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಈಗಾಗಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎನ್ಡಿಆರ್ಎಫ್ ಹಾಗೂ ಸ್ಥಳೀಯ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.
ಪ್ರಮುಖವಾಗಿ ಕಸೂರ್ನಿಂದ ಬಿಡುಗಡೆಗೊಂಡಿರುವ ನೀರು ಫಿರೋಜ್‌ಪುರ ಜಿಲ್ಲೆಯ ಕೆಲವೊಂದು ಗ್ರಾಮಗಳಿಗೆ ನುಗ್ಗುವ ಸಾಧ್ಯತೆ ಇದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಕೂಡ ಟ್ವೀಟ್ ಮಾಡಿದ್ದು, ಈ ಸ್ಥಳಗಳಲ್ಲಿ ಉಂಟಾಗುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಲು ಕೇಂದ್ರ ಗೃಹ ಸಚಿವಾಲಯ ತಂಡವೊಂದನ್ನು ಕಳುಹಿಸಲು ನಿರ್ಧರಿಸಿದೆ.