ಕೊಲ್ಲಂ(ಕೇರಳ) : ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ 2019ರ ಬಜೆಟ್‌ನಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವುದಾಗಿ ಹೇಳಿತ್ತು. ಹೀಗಾಗಿ ಎಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ದೇಶದಲ್ಲಿ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕೇರಳದ ಕೊಲ್ಲಂನಲ್ಲಿ ಎಲೆಕ್ಟ್ರಾನಿಕ್ ಚಾರ್ಜಿಂಗ್ ಸ್ಟೇಷನ್‌ಗಳು ತಲೆ ಎತ್ತುತ್ತಿವೆ.
ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್‌ಇಬಿ) ಯಿಂದ ಇದೇ ಮೊದಲ ಬಾರಿಗೆ ಕೊಲ್ಲಂ ಜಿಲ್ಲೆಯಲ್ಲಿ ವಿದ್ಯುತ್ ಚಾರ್ಜಿಂಗ್ ಸ್ಟೇಷನ್ ಆರಂಭವಾಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿದೆ.
ಈ ವಿದ್ಯುತ್ ಚಾರ್ಜಿಂಗ್ ಮಾಡುವ ಸ್ಟೇಷನ್ ಜನರು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವಂತೆ ಪ್ರೇರೇಪಣೆ ಮಾಡಲಿದೆ. ಈ ಯೋಜನೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ನೂತನವಾಗಿ ನಿರ್ಮಿಸಿರುವ ಈ ಸ್ಟೇಷನ್‌ನಲ್ಲಿ ಒಮ್ಮೆಗೆ ಎರಡು ವಾಹನಗಳ ಬ್ಯಾಟರಿಗಳಿಗೆ 80 ಕಿಲೋ ವ್ಯಾಟ್ಸ್‌ನ ಸಾಮರ್ಥ್ಯದ ವಿದ್ಯುತ್ ಚಾರ್ಜಿಂಗ್ ಮಾಡಬಹುದಾಗಿದೆ. 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಚಾರ್ಜಿಂಗ್ ಕೇಂದ್ರವನ್ನು ನಿರ್ಮಿಸಲಾಗಿದೆ.
ಎಲೆಕ್ಟ್ರಾನಿಕ್ ಸ್ಕೂಟರ್‌ಗಳಿಗೂ ಇಲ್ಲಿ ವಿದ್ಯುತ್ ಜಾರ್ಜಿಂಗ್ ಮಾಡಲಾಗುತ್ತದೆ. ಕಾರುಗಳಿಗೆ 60 ಕಿಲೋ ವ್ಯಾಟ್ಸ್ ಆದರೆ ಸ್ಕೂಟರ್‌ಗೆ 20 ಕಿಲೋ ವ್ಯಾಟ್ಸ್‌ನ ವಿದ್ಯುತ್ ಸಾಮರ್ಥ್ಯವನ್ನು ತುಂಬಿಸಲಾಗುತ್ತದೆ. ಆದರೆ ಜಾರ್ಜಿಂಗ್ ದರವನ್ನು ಇನ್ನೂ ನಿಗಧಿ ಮಾಡಿಲ್ಲ.