ಪಾಲಕ್ಕಾಡ್: ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳಿಂದ ತಯಾರಿಸಲ್ಪಡುತ್ತಿದ್ದ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ಹೇಗೆ ತಯಾರಿಸುವುದು ಎಂಬುದನ್ನು ಕೇರಳದ ಕರುಣಗಪ್ಪಳ್ಳಿ ಮೂಲದ ಮಿಧುನ್ ಲಾಲ್ ಎಂಬುವರು ತೋರಿಸಿಕೊಟ್ಟಿದ್ದಾರೆ.
ಕೇರಳ ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ವ್ಯಾಪಾರ ಮೇಳದಲ್ಲಿ ಉತ್ತಮ ಗುಣಮಟ್ಟದ ಹದಿನಾಲ್ಕು ಪರಿಸರ ಸ್ನೇಹಿ ವಸ್ತುಗಳನ್ನು ಪ್ರಸ್ತುತಪಡಿಸಿದ್ದಾರೆ.
ಅಡಿಕೆಯ ಹಾಳೆ ಬಳಸಿ ಬೌಲ್, ಚಮಚ, ಪ್ಲೇಟ್ಸ್, ಲೋಟ, ಸ್ಟ್ರಾ, ಗಿಫ್ಟ್ ಬಾಕ್ಸ್ಗಳನ್ನು ತಯಾರಿಸಿದ್ದಾರೆ. ಇನ್ನು ಕಬ್ಬಿನ ನಾರು, ಬಿದಿರು ಬಳಸಿ ವಿವಿಧ ರೀತಿಯ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶಿಸಲಾಯಿತು. ಗೋಧಿ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ಕ್ಯಾರಿ ಬ್ಯಾಗ್‌ಗಳೂ ಇಲ್ಲಿದ್ದವು.
ಈ ಉತ್ಪನ್ನಗಳನ್ನು ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ತಯಾರಿಸಬಹುದು ಮತ್ತು ತಲುಪಿಸಬಹುದು ಎಂದು ಮಿಧುನ್ ಲಾಲ್ ತಿಳಿಸಿದ್ದಾರೆ.