ETV Bharat / bharat

ಪಿಒಕೆಯಲ್ಲಿ ಭೂಕಂಪನಕ್ಕೆ 27 ಬಲಿ, 300ಕ್ಕೂ ಹೆಚ್ಚು ಮಂದಿಗೆ ಗಾಯ - POK

ರಿಕ್ಟರ್​ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪನ ಭಾರತ ಹಾಗೂ ಪಾಕ್​ ಗಡಿಯಲ್ಲಿ ಉಂಟಾಗಿದೆ. ಭೂಮಿಯ 40 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್​ಜಿಎಸ್​) ಪ್ರಕಾರ, 5.8 ತೀವ್ರತೆಯ ಕಂಪನವು 10 ಕಿ.ಮೀ. ಆಳದಲ್ಲಿ ಅಪ್ಪಳಿಸಿದೆ. ಇದರ ಕೇಂದ್ರ ಬಿಂದು ಪಿಒಕೆಯ ಮಿರ್​ಪುರ ಹತ್ತಿರವಿದೆ ಎಂದಿತ್ತು.

ಸಾಂದರ್ಭಿಕ ಚಿತ್ರ
author img

By

Published : Sep 24, 2019, 10:00 PM IST

Updated : Sep 24, 2019, 10:07 PM IST

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಂಭವಿಸಿದ ಭೂಕಂಪನದಿಂದ 27 ಜನರು ಸಾವನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಭಾರತದ ಭೂಕಂಪ ಮಾಪಕ ವರದಿ ಪ್ರಕಾರ 6.3 ತೀವ್ರತೆಯ ಕಂಪನ ಸಂಭವಿಸಿದೆ. ಭೂಮಿಯ 40 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದುವಿದೆ ಎಂದು ತಿಳಿಸಿತ್ತು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್​ಜಿಎಸ್​) ಪ್ರಕಾರ, 5.8 ತೀವ್ರತೆಯ ಕಂಪನವು 10 ಕಿ.ಮೀ. ಆಳದಲ್ಲಿ ಅಪ್ಪಳಿಸಿದೆ. ಇದರ ಕೇಂದ್ರ ಬಿಂದು ಪಿಒಕೆಯ ಮಿರ್​ಪುರ ಹತ್ತಿರವಿದೆ ಎಂದಿತ್ತು. ಸಾವು- ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಮನೆ, ಕಟ್ಟಡ, ಸಾರ್ವಜನಿಕರ ಆಸ್ತಿ- ಪಾಸ್ತಿಗೂ ಹಾನಿ ಉಂಟಾಗಿ ಅಪಾರ ಪ್ರಮಾಣ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಭಾರತದ ನವದೆಹಲಿ, ಚಂಡೀಗಢ​, ಕಾಶ್ಮೀರ, ಪಂಜಾಬ್​, ಹರಿಯಾಣ ಒಳಗೊಂಡಂತೆ ಪಾಕಿಸ್ತಾನದ ಪೇಶಾವರ್​, ರಾಲ್ಪಿಂಡಿ ಮತ್ತು ಲಾಹೋರ್​ನಲ್ಲಿ 8 ರಿಂದ10 ಸೆಕೆಂಡ್​ಗಳ ಕಾಲ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರ ವಿಭಾಗ ತಿಳಿಸಿತ್ತು.

Intro:Body:Conclusion:
Last Updated : Sep 24, 2019, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.