ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್ನ ಚಾಲಕ ಹಾಗೂ ಸಹಾಯಕನಿಗೆ ನಾರ್ಕೋ( ಸುಳ್ಳು ಪತ್ತೆ ಪರೀಕ್ಷೆ) ಟೆಸ್ಟ್ ನಡೆಸಲು ನಿರ್ಧರಿಸಿದ್ದು, ಹೀಗಾಗಿ ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆಯಲು ಸಿಬಿಐ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಸಿಬಿಐ ಈಗಾಗಲೇ ಈ ಇಬ್ಬರಿಗೆ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಗುಜರಾತ್ನ ಗಾಂಧಿನಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದೆ. ಆದರೆ ಅದರ ವರದಿ ಇನ್ನಷ್ಟೇ ಬರಬೇಕಿದೆ. ಇನ್ನು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ಯಾಚಾರ ಸಂತ್ರಸ್ತೆಯನ್ನು ತನಿಖಾ ಸಂಸ್ಥೆ ಇನ್ನೂ ಮಾತನಾಡಿಸಿಲ್ಲ. ವೈದ್ಯರು ಆಕೆ ಯಾವುದೇ ಸಂಭಾಷಣೆ ನಡೆಸಲು ವೈದ್ಯಕೀಯವಾಗಿ ಅನರ್ಹಳು ಎಂದು ಹೇಳಿರುವ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ಆಕೆಯ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ತಜ್ಞರು ಹಾಗೂ ಪ್ರತ್ಯಕ್ಷದರ್ಶಿಗಳ ಸಲಹೆ ಪಡೆದು ಘಟನೆಯ ಮರುಸೃಷ್ಟಿ ಮಾಡಲು ಕೂಡ ಚಿಂತಿಸುತ್ತಿದೆ. ಈಗಾಗಲೇ ಪ್ರಕರಣದ ಬಗ್ಗೆ 2 ವಾರದೊಳಗಾಗಿ ತನಿಖೆ ಪೂರ್ತಿ ಗೊಳಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ್ದು, ತನಿಖೆ ಪೂರ್ಣಗೊಳಿಸುವ ಭರವಸೆಯಲ್ಲಿ ಸಿಬಿಐ ಅಧಿಕಾರಿಗಳಿದ್ದಾರೆ.
ಏನಿದು ನಾರ್ಕೋ ಅನಾಲಿಸಿಸ್ ಪರೀಕ್ಷೆ
ನಾರ್ಕೋ ಅನಾಲಿಸಿಸ್ ಪರೀಕ್ಷೆಯಲ್ಲಿ ಆರೋಪಿಗೆ ಬರ್ಬಿಟ್ಯುರೆಟ್ಸ್ ಎಂದು ಕರೆಯಲಾಗುವ ರಾಸಾಯನಿಕವನ್ನು ಸಿರಿಂಜ್ ಮೂಲಕ ನೀಡಿ ಮನಸ್ಸಿನಿಂದ ನಿಗ್ರಹಿಸಲ್ಪಟ್ಟ ಹಾಗೂ ಮುಚ್ಚಿಟ್ಟ ನೆನಪುಗಳನ್ನು, ಘಟನೆಗಳನ್ನು ಬಯಲಿಗೆಳೆಯಲಾಗುತ್ತದೆ. ಇದನ್ನು ಸತ್ಯದ್ರವ(truth serum) ಎಂದು ಕೂಡ ಕರೆಯಲಾಗುತ್ತದೆ. ಈ ವೇಳೆ ದೇಹಕ್ಕೆ ಅಳವಡಿಸಿರುವ ಪಾಲಿಗ್ರಾಪ್ನಲ್ಲಿ ಏರ್ಪಡುವ ತರಂಗಾಂತರದಲ್ಲಾಗುವ ಬದಲಾವಣೆಗಳಿಂದ ಆತ ಸುಳ್ಳು ಹೇಳುತ್ತಿದ್ದಾನೋ ಸತ್ಯ ಹೇಳುತ್ತಿದ್ದಾನೋ ಎನ್ನುವುದು ತಿಳಿಯುತ್ತದೆ.
ಅಂದು ನಡೆದಿದ್ದೇನು?
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಜುಲೈ 28ರಂದು ಉನ್ನಾವೋ ರೇಪ್ ಸಂತ್ರಸ್ತೆ , ಆಕೆಯ ವಕೀಲರು ಹಾಗೂ ಸಂಬಂಧಿಕರು ಚಲಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ನಂಬರ್ ಪ್ಲೇಟ್ ಇಲ್ಲದ ಟ್ರಕ್ವೊಂದು ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ರೇಪ್ ಸಂತ್ರಸ್ತೆಯ ಇಬ್ಬರು ಸಂಬಂಧಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಆಕೆ ಹಾಗೂ ಆಕೆಯ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2017ರಲ್ಲಿ 19 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ ಕುಲ್ದೀಪ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾರೆ.
Intro:Body:
NEW DELHI: The CBI is likely to carry out narco-analysis on the driver and helper of the truck that hit the Unnao rape survivor's car and may seek their custody in this regard, officials said on Monday.
The CBI had subjected the two to a lie-detector test in its office and brain mapping at Forensic Science Laboratory, Gandhinagar, Gujarat but the report is still awaited, they said.
The agency is yet to speak to the victim, allegedly raped by expelled BJP MLA Kuldeep Singh Sengar, and her lawyer who are under treatment at the All India Institute of Medical Sciences as doctors have said that they are medically unfit to for any interaction, they said.
The survivor was airlifted from King George's Medical University in Lucknow to AIIMS for better care as she continued to be critical.
The car in which the victim and her lawyer were travelling was hit by the speeding truck, which was coming from the opposite direction on the wrong side and had its number plate smeared with black paint, in Gurubakshganj area of Rae Bareli on July 28.
In the accident, the victim and her lawyer were critically injured while both her aunts were killed.
In the absence of interaction with the two survivors-- the rape victim and the lawyer-- the CBI is depending on expert opinions and eye-witness accounts to recreate the sequence of the accident, they said.
In narco-analysis, a person is injected with chemicals known as barbiturates commonly called truth serum to bring out repressed thoughts and memories. The polygraph test measures vital body parameters when a question is put before a person.
The variations in these parameters indicate whether a person is truthful or not.
Brain mapping uses neuroscience techniques to see brain's reaction of a person when pictures and information related to an event is placed before them.
All the three techniques do not have any value as evidence in the courts but they are used to bring forth hidden information which could lead to recovery of material or information to be used during the trial or apprehension of an accused.
"We are hopeful to complete the probe within two weeks as directed by the Supreme Court. We are moving in right direction," a CBI official said.
The apex court, which had earlier given two weeks to the CBI to complete the probe, extended the time by another two weeks while noting that the probe agency has done "quite extensive investigation" so far in the case.
The CBI has booked Sengar and nine others on murder charges in connection with the truck-car collision.
The state government has come under severe criticism for failing to provide security to the 19-year-old woman who was allegedly raped by the BJP MLA in 2017.
Her uncle Mahesh Singh, who is lodged in Rae Bareli prison, has alleged that false cases were slapped against him by people close to Sengar for not yielding to the pressure after his niece accused the MLA of raping her and he has been transferred to Rae Bareli prison where threat to his life looms.
The police had arrested Singh and he was transferred to Rae Bareli prison.
Singh, who lost his wife and sister-in-law in the accident, has also alleged that complaints by the victim's family were not paid heed to by the local police, the FIR said.
On Tuesday, the Centre handed over the probe to the CBI on the recommendation of the Uttar Pradesh government.
The Uttar Pradesh Police had on July 29 filed a murder case against Sengar and nine others after the rape survivor's family filed a complaint, alleging "conspiracy" behind the car crash.
Conclusion: