ETV Bharat / bharat

ದೆಹಲಿಯಲ್ಲಿ ಸಿಲುಕಿರುವ ಕೇರಳಿಗರ ಪ್ರಯಾಣ ವೆಚ್ಚ ನಾವು ಭರಿಸುತ್ತೇವೆ: ಸಿಎಂಗೆ ಕಾಂಗ್ರೆಸ್ ಪತ್ರ

ರಾಷ್ಟ್ರ ರಾಜಧಾನಿಯಲ್ಲಿ ಸಿಲುಕಿರುವ ಕೇರಳಿಗರು ತಮ್ಮ ರಾಜ್ಯ ತಲುಪಲು ಅಗತ್ಯವಿರುವ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಚಿ ಅನಿಲ್ ಕುಮಾರ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಸಿಲುಕಿರುವ ಕೇರಳಿಗರ ಪ್ರಯಾಣ ವೆಚ್ಚ ನಾವು ಭರಿಸುತ್ತೇವೆ
dpcc
author img

By

Published : May 11, 2020, 12:51 PM IST

Updated : May 11, 2020, 1:05 PM IST

ನವದೆಹಲಿ: ಲಾಕ್‌ಡೌನ್‌ನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸಿಲುಕಿರುವ ಕೇರಳಿಗರು ತಮ್ಮ ರಾಜ್ಯ ತಲುಪಲು ಅಗತ್ಯವಿರುವ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ (ಡಿಪಿಸಿಸಿ) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದೆ.

"ತಮ್ಮ ಪ್ರಯಾಣ ವೆಚ್ಚವನ್ನು ಭರಿಸಲಾಗದ ಮತ್ತು ಕೇರಳಕ್ಕೆ ಮರಳಲು ಬಯಸುವ ಎಲ್ಲ ಕೇರಳಿಗರ ಪ್ರಯಾಣ ವೆಚ್ಚವನ್ನು ಡಿಪಿಸಿಸಿ ಭರಿಸಲು ಇಚ್ಚಿಸುತ್ತದೆ. ನಿಮ್ಮಿಂದ ಆದಷ್ಟು ಬೇಗ ಉತ್ತರವನ್ನು ಎದುರು ನೋಡುತ್ತಿದ್ದೇವೆ" ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಚಿ ಅನಿಲ್ ಕುಮಾರ್ ಅವರು ಪಿಣರಾಯಿ ವಿಜಯನ್ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್-19ನಿಂದಾಗಿ ಜನ ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರ ಪ್ರಯಾಣ ವೆಚ್ಚವನ್ನು ನಾವು ಭರಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಜನರಿಗೆ ಕೇರಳಕ್ಕೆ ಮರಳಲು ರೈಲು ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರ ರೈಲ್ವೆ ಸಚಿವಾಲಯಕ್ಕೆ ಸೂಚಿಸಿದೆ.

Last Updated : May 11, 2020, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.