ನವದೆಹಲಿ: ಶ್ರೀಲಂಕಾದ ವಾಯವ್ಯ ಕರಾವಳಿಯಲ್ಲಿ ಅಗ್ನಿ ಅನಾಹುತಕ್ಕೆ ಒಳಗಾಗಿರುವ ಕಚ್ಚಾ ತೈಲ ಸಾಗಿಸುತ್ತಿದ್ದ ಎಂಟಿ ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿಯನ್ನು ನಂದಿಸಲು ಭಾರತದಿಂದ ಡೋನಿಯರ್ ಏರ್ಕ್ರಾಫ್ಟ್ ಅನ್ನು ಕಳುಹಿಸಲಾಗಿದೆ.
ಈ ಏರ್ಕ್ರಾಫ್ಟ್ನಲ್ಲಿ 700 ಕಿಲೋಗ್ರಾಮ್ನಷ್ಟು ಡಿಸಿಪಿ ( ಡ್ರೈ ಕೆಮಿಕಲ್ ಪೌಡರ್) ಅನ್ನು ರವಾನಿಸಲಾಗಿದ್ದು, ಬೆಂಕಿ ನಂದಿಸಲು ಈ ರಾಸಾಯನಿಕ ಬಳಸಲಾಗುತ್ತದೆ.
ಕೆಲವು ದಿನಗಳಿಂದ ತಹಬದಿಗೆ ಬಂದಿದ್ದ ಬೆಂಕಿ ಮತ್ತೆ ಕಾಣಿಸಿಕೊಂಡಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಬೆಂಕಿಯನ್ನು ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ನೌಕಾಪಡೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದೆ.
-
@IndiaCoastGuard invoking SACEP & MoU provisions, #ICG ship Abheek entering Trincomalee harbour this morning to hand over 1500 kg of DCP to SL authorities for #FireFighting #MTNewDiamond. Dornier aircraft being launched Chennai to Trincomalee with 700 kg DCP. @MEAIndia pic.twitter.com/UHWl07p4rE
— Indian Coast Guard (@IndiaCoastGuard) September 8, 2020 " class="align-text-top noRightClick twitterSection" data="
">@IndiaCoastGuard invoking SACEP & MoU provisions, #ICG ship Abheek entering Trincomalee harbour this morning to hand over 1500 kg of DCP to SL authorities for #FireFighting #MTNewDiamond. Dornier aircraft being launched Chennai to Trincomalee with 700 kg DCP. @MEAIndia pic.twitter.com/UHWl07p4rE
— Indian Coast Guard (@IndiaCoastGuard) September 8, 2020@IndiaCoastGuard invoking SACEP & MoU provisions, #ICG ship Abheek entering Trincomalee harbour this morning to hand over 1500 kg of DCP to SL authorities for #FireFighting #MTNewDiamond. Dornier aircraft being launched Chennai to Trincomalee with 700 kg DCP. @MEAIndia pic.twitter.com/UHWl07p4rE
— Indian Coast Guard (@IndiaCoastGuard) September 8, 2020
ಸೆಪ್ಟೆಂಬರ್ 3ರಂದು ಎಂಟಿ ನ್ಯೂ ಡೈಮಂಡ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದುವರೆಯುತ್ತಿದೆ.
ಈ ಹಡಗು 333 ಮೀಟರ್ ಉದ್ದವಿದ್ದು, ಮೂರು ಲಕ್ಷ ಟನ್ನಷ್ಟು ಕಚ್ಚಾ ತೈಲವನ್ನು ಕುವೈತ್ನಿಂದ ಪಾರಾದೀಪ್ಗೆ ಸಾಗಿಸುತ್ತಿತ್ತು. ಈ ತೈಲವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ಗೆ ಪೂರೈಸಲು ಸಾಗಣೆ ಮಾಡಲಾಗುತ್ತಿತ್ತು.
ಈಗ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣದಿಂದಾಗಿ ಡ್ರೈ ಕೆಮಿಕಲ್ ಪೌಡರ್ ಇರುವ ಡೋನಿಯರ್ ಏರ್ಕ್ರಾಫ್ಟ್ ಅನ್ನು ಚೆನ್ನೈನಿಂದ ಸ್ಥಳಕ್ಕೆ ಕಳುಹಿಸಿ, ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.