ETV Bharat / bharat

ಚಿಂತೆ ಬಿಡಿ .. ಜನ್ ಧನ್ ಖಾತೆಯಲ್ಲಿನ ಹಣ ವಾಪಸ್ ಹೋಗದು:  ಕೇಂದ್ರದ ಅಭಯ

author img

By

Published : Apr 14, 2020, 2:20 PM IST

ಜನ್​ ಧನ್​ ಖಾತೆಗಳಿಗೆ ವರ್ಗಾಯಿಸಲಾದ ಹಣ ಖಾತೆಯಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಖಾತೆದಾರರು ತಮಗೆ ಬೇಕಾದಾಗ ಬ್ಯಾಂಕ್​ನಿಂದ ಅಥವಾ ಎಟಿಎಂ ಮೂಲಕ ಹಣ ಪಡೆಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

Jan Dhan
Jan Dhan

ಹೊಸದಿಲ್ಲಿ: ಜನ್ ಧನ್ ಖಾತೆಗಳಿಗೆ ಸರ್ಕಾರದಿಂದ ವರ್ಗಾಯಿಸಲಾದ ಹಣ ಸಂಪೂರ್ಣ ಸುರಕ್ಷಿತವಾಗಿದೆ. ತಕ್ಷಣ ಹಣ ಪಡೆಯದಿದ್ದರೆ ವಾಪಸ್ ಹೋಗುತ್ತದೆ ಎಂಬುದು ವದಂತಿ ಮಾತ್ರ. ಖಾತೆದಾರರು ತಮಗೆ ಬೇಕಾದಾಗ ಹಣ ಪಡೆದುಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

"ಜನ್​ ಧನ್​ ಖಾತೆಗಳಿಗೆ ವರ್ಗಾಯಿಸಲಾದ ಹಣ ಖಾತೆಯಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಖಾತೆದಾರರು ತಮಗೆ ಬೇಕಾದಾಗ ಬ್ಯಾಂಕ್​ನಿಂದ ಅಥವಾ ಎಟಿಎಂ ಮೂಲಕ ಹಣ ಪಡೆಯಬಹುದು. ಈ ಕುರಿತು ಹರಡಿರುವ ವದಂತಿಗಳಿಗೆ ನಾಗರಿಕರು ಕಿವಿಗೊಡಬೇಕಿಲ್ಲ" ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಕಳೆದ ರಾತ್ರಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಲಾಕ್​ಡೌನ್​ ಸಂಕಷ್ಟದ ಸಮಯದಲ್ಲಿ ಮನೆ ಖರ್ಚು ನಡೆಸಲು ನೆರವಾಗುವ ನಿಟ್ಟಿನಲ್ಲಿ ದೇಶದ 20.5 ಕೋಟಿ ಮಹಿಳಾ ಜನ್​ ಧನ್​ ಖಾತೆಗಳಿಗೆ ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳು ತಲಾ 500 ರೂಪಾಯಿ ಜಮಾ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಘೋಷಿಸಿದ್ದರು. ಅದರಂತೆ ಮಹಿಳಾ ಜನ್​ ಧನ್​ ಖಾತೆಗಳಿಗೆ ಹಣ ಜಮೆಯಾಗುತ್ತಿದೆ. ಆದರೆ ಖಾತೆಯಲ್ಲಿನ ಹಣವನ್ನು ತಕ್ಷಣ ಪಡೆದುಕೊಳ್ಳದಿದ್ದರೆ ಹಣ ಸರ್ಕಾರಕ್ಕೆ ವಾಪಸ್​ ಹೋಗಲಿದೆ ಎಂಬ ಸಂದೇಶ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.