ಮುಂಬೈ: ಮಹಾರಾಷ್ಟ್ರದ ಪೊವಾಯ್ ಪ್ರದೇಶದಲ್ಲಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲು ಮಾಡಲಾಗಿದೆ.
ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲು ಮಾಡಿಕೊಂಡಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.ಅಕ್ಟೋಬರ್ 22ರಂದು ಮುಂಬೈನ ಪೊವಾಯ್ ಗ್ಯಾಲರಿಯಾ ಮಾಲ್ ಬಳಿ ಒಂಬತ್ತು ವರ್ಷದ ನಾಯಿ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನ ಮಹಿಳೆಯೋರ್ವಳು ಗಮನಿಸಿದ್ದರು. ಅದನ್ನ ಪ್ರಾಣಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನಾಯಿಯ ಖಾಸಗಿ ಭಾಗದಿಂದ ರಕ್ತಸ್ರಾವ ಆಗುತ್ತಿರುವುದನ್ನ ಗಮನಿಸಿರುವ ವೈದ್ಯರು, ಅದರ ಖಾಸಗಿ ಭಾಗದಿಂದ ಮರದ ಕೋಲು ತೆಗೆದಿದ್ದಾರೆ. ಈ ವೇಳೆ ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಪ್ರಾಣಿ ಹಿಂಸೆ ಕಾಯ್ದೆ ಆಧಾರದ ಮೇಲೆ ಪೋವಾಯ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಸೆಕ್ಷನ್ಗಳ ಅಡಿ ದೂರು ದಾಖಲು ಮಾಡಲಾಗಿದೆ.