ETV Bharat / bharat

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಡಬಲ್‌ ಸಂಬಳ: ಹರಿಯಾಣ ಸರ್ಕಾರದ ಪ್ರೋತ್ಸಾಹ - ವೈದ್ಯ ಸಿಬ್ಬಂದಿ

ಹರಿಯಾಣದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಿಬ್ಬಂದಿಗೆ ಡಬಲ್​ ಸ್ಯಾಲರಿ ನೀಡುವ ಕುರಿತು ಹರಿಯಾಣ ಸರ್ಕಾರ ಘೋಷಣೆ ಮಾಡಿದೆ.

Haryana Chief Minister Manohar Lal Khattar

author img

By

Published : Apr 9, 2020, 7:34 PM IST

ಚಂಡಿಗಢ(ಹರಿಯಾಣ): ದೇಶಾದ್ಯಂತ ಕೊರೊನಾ ಸೋಂಕಿತರಿಗೆ ನೀಡುವ ವೈದ್ಯರು ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ ಚಿಕಿತ್ಸೆ ನೀಡುವ ವೈದ್ಯರಿಗೆ ಹರಿಯಾಣ ಸರ್ಕಾರ ಸಂಬಳವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ಮಾಯವಾಗುವವರೆಗೂ ರಾಜ್ಯದಲ್ಲಿನ ಎಲ್ಲ ಮೆಡಿಕಲ್​ ಸ್ಟಾಫ್‌​, ನರ್ಸ್, ಆ್ಯಂಬುಲೆನ್ಸ್​ ಸಿಬ್ಬಂದಿ, ಔಷಧಿ ವಿತರಕರು​ ಹಾಗೂ ಪೌರಕಾರ್ಮಿಕರಿಗೆ ಸಂಬಳ ದ್ವಿಗುಣಗೊಳಿಸಿ ಸರ್ಕಾರ ಆದೇಶಿಸಿ ಪ್ರೋತ್ಸಾಹಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹರಿಯಾಣ ಸಿಎಂ ಮನೋಹರಲಾಲ್​ ಖಟ್ಟರ್​, ವೈದ್ಯರಿಗೆ 50 ಲಕ್ಷ, ನರ್ಸ್​ಗಳಿಗೆ 30 ಲಕ್ಷ, ಪ್ಯಾರಾ ಮೆಡಿಕಲ್​​ ಸಿಬ್ಬಂದಿಗೆ 20 ಲಕ್ಷ ಹಾಗೂ ಪೌರಕಾರ್ಮಿಕರಿಗೆ 10 ಲಕ್ಷ ರೂಗಳ ವಿಮಾ ಸೌಲಭ್ಯವನ್ನೂ ನೀಡಿದ್ದಾರೆ.

ಇದರ ಜತೆಗೆ 5 ಕೋಟಿ ರೂ ವೆಚ್ಚದಲ್ಲಿ 2,588 ಪಂಚಾಯ್ತಿಗಳಿಗೆ ಸ್ಯಾನಿಟರಿ ಸಾಮಾಗ್ರಿ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ 169 ಕೋವಿಡ್​-19 ಪ್ರಕರಣಗಳು ಕಂಡು ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.