ಹೈದರಾಬಾದ್: ಪುಲ್ವಾಮಾ ಉಗ್ರ ದಾಳಿಯಾದಾಗ ಬೀಫ್ ಬಿರಿಯಾನಿ ತಿಂದು, ಮಲಗಿದ್ರಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಗುಡುಗಿದ್ದಾರೆ.
ಶನಿವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲಾಕೋಟ್ನಲ್ಲಿ ಭಾರತೀಯ ವಾಯುಸೇನೆ ಬಾಂಬ್ ಹಾಕಿ ಬಂದಿದ್ದು, 250 ಜನ ಮೃತಪಟ್ಟಿದ್ದಾರೆ ಎಂದು ಶಾ ಹೇಳಿಕೆ ನೀಡಿದ್ದರೆ, 300 ಫೋನ್ಗಳನ್ನು ಎನ್ಟಿಆರ್ಒ ಟ್ಯಾಪ್ ಮಾಡಿದೆ ಅಂತ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಬಾಲಾಕೋಟ್ನಲ್ಲಿರುವ 300 ಪೋನ್ಗಳನ್ನು ಪತ್ತೆ ಹಚ್ಚುತ್ತೀರಿ. ಆದ್ರೆ ನಿಮ್ಮ ಕಾಶ್ಮೀರದಲ್ಲಿರುವ ಪುಲ್ವಾಮಾಗೆ 50 ಕೆಜಿ ಆರ್ಡಿಎಕ್ಸ್ ಬಾಂಬ್ ಸಾಗಿಸಿದ್ದು ನಿಮಗೆ ಗೊತ್ತೇ ಆಗ್ಲಿಲ್ವಾ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಅಲ್ಲದೆ, ಯೋಧರ ಮೇಲೆ ಬಾಂಬ್ ದಾಳಿ ನಡೆದಾಗ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಬೀಫ್ ಬಿರಿಯಾನಿ ತಿಂದು ಮಲಗಿದ್ದರೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಓವೈಸಿ, ದೇಶದಲ್ಲಿ ಜಾತ್ಯಾತೀತತೆ ವಿರೋಧಿಸುವವರ ವಿರುದ್ಧ ನಾನು ಹೋರಾಡುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.