ನವದೆಹಲಿ: ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ರಫೇಲ್ ಡೀಲ್ ವಿಳಂಬವಾಗಲು ಅಗಸ್ಟಾ ವೆಸ್ಟ್ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಕಾರಣನಾಗಿದ್ದಾನಾ ಎನ್ನುವ ಕುರಿತಂತೆ ತನಿಖೆ ನಡೆಸಲು ತನಿಖಾ ಸಂಸ್ಥೆ ಮುಂದಾಗಿದೆ.
ಎರಡನೇ ಅವಧಿಯ ಯುಪಿಎ ಸರ್ಕಾರ ರಫೇಲ್ ಡೀಲ್ ವಿಳಂಬ ಮಾಡಲು ಕ್ರಿಶ್ಚಿಯನ್ ಮೈಕೆಲ್ ಪ್ರಭಾವ ಇತ್ತು ಎನ್ನುವ ಸುಳಿವು ತನಿಖಾ ಸಂಸ್ಥೆಗೆ ದೊರೆತಿದೆ ಎನ್ನಲಾಗಿದೆ.
2012ರಲ್ಲಿ ಒಪ್ಪಂದದಲ್ಲಿ ಕೊಂಚ ಭಿನ್ನಮತ ಉಂಟಾದ ಬಳಿಕ ಅಂದಿನ ಮನಮೋಹನ್ ಸಿಂಗ್ ಸರ್ಕಾರ ರಫೇಲ್ ಡೀಲ್ಅನ್ನು ಮೂಲೆಗೆ ತಳ್ಳಿತ್ತು. ಇದರಲ್ಲಿ ಮೈಕೆಲ್ ಪ್ರಭಾವದ ಕುರಿತು ಸದ್ಯ ಶಂಕೆ ವ್ಯಕ್ತವಾಗಿದೆ.