ETV Bharat / bharat

ಧೋನಿ ಮಗಳಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ರಾಂಚಿಗೆ ಕರೆತಂದ ಪೊಲೀಸರು - ಧೋನಿ ಮಗಳು

ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಗುಜರಾತ್​ನಿಂದ ಜಾರ್ಖಂಡ್​ಗೆ ಕರೆತರಲಾಗಿದೆ.

Dhoni daughter threat case, Dhoni daughter threat case news, accused brought to Ranchi, Dhoni daughter, Dhoni daughter news, ಧೋನಿ ಮಗಳಿಗೆ ಬೆದರಿಕೆ ಪ್ರಕರಣ, ಧೋನಿ ಮಗಳಿಗೆ ಬೆದರಿಕೆ ಪ್ರಕರಣ ಸುದ್ದಿ, ಆರೋಪಿಯನ್ನು ರಾಂಚಿಗೆ ಕರೆತಂದ ಪೊಲೀಸರು, ಧೋನಿ ಮಗಳು, ಧೋನಿ ಮಗಳು ಸುದ್ದಿ,
ಸಂಗ್ರಹ ಚಿತ್ರಧೋನಿ ಮಗಳಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ರಾಂಚಿಗೆ ಕರೆತಂದ ಪೊಲೀಸರು
author img

By

Published : Oct 16, 2020, 4:59 AM IST

ರಾಂಚಿ : ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕ ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ವಿಕೃತ ಮನಸ್ಸಿನ ಬಾಲಕನನ್ನು ಪೊಲೀಸರು ಗುಜರಾತ್​ನ ಕಚ್​ ಬಳಿಯ ಮುಂದ್ರಾದಲ್ಲಿ ಬಂಧಿಸಿದ್ದರು. ಈಗ ಆ ಆರೋಪಿಯನ್ನು ಜಾರ್ಖಂಡ್​ ಪೊಲೀಸರು ಗುಜರಾತ್​ನಿಂದ ಕರೆತಂದಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿಲ್ಲವೆಂದು ಅವರ ಮಗಳಿಗೆ ಆರೋಪಿ ಬೆದರಿಕೆ ಹಾಕಿದ್ದ. ಆ ಬಳಿಕ ಜಾರ್ಖಂಡ್​ನ ರಾಂಚಿ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗೆ ಬಲೆ ಬೀಸಿದ್ದರು. ಅಷ್ಟರಲ್ಲೇ ಆರೋಪಿ ಗುಜರಾತ್​ನ ಕಚ್​ನಲ್ಲಿ ಬಂಧಿಸಲಾಗಿತ್ತು. ಈಗ ಆ ಆರೋಪಿಯನ್ನು ಪೊಲೀಸರು ಗುಜರಾತ್​ನಿಂದ ರಾಂಚಿಗೆ ಕರೆತಂದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಗುಜರಾತ್​ನಿಂದ ರಾಂಚಿಗೆ ಕರೆತರಲಾಗಿದೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ರಾಂಚಿ ಎಸ್​ಪಿ ನೌಶಾದ್​ ಆಲಂ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.