ಮುಂಬೈ (ಮಹಾರಾಷ್ಟ್ರ): ಧಾರವಿಯಲ್ಲಿ ಮತ್ತೇ ಐದು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾ ಪೀಡಿತರ ಸಂಖ್ಯೆ ಈ ಪ್ರದೇಶದಲ್ಲಿ 22 ಕ್ಕೆ ಏರಿದೆ.
ಈ ಐದು ಹೊಸ ಪ್ರಕರಣಗಳಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಇದ್ದಾರೆ. ಈ ಪ್ರಕರಣಗಳು ಪಿಎಂಜಿಪಿ ಕಾಲೋನಿ, ಮುಸ್ಲಿಂ ನಗರ, ಕಲ್ಯಾಣ್ವಾಡಿ ಮತ್ತು ಮುರುಗನ್ ಚಾಲ್ನಿಂದ ವರದಿಯಾಗಿವೆ. ಧಾರವಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಡಾ.ಬಲಿಯಾ ನಗರದಿಂದ ವರದಿಯಾಗಿದ್ದು, ಒಂದು ಸಾವು ಸೇರಿದಂತೆ ಐದು ಪ್ರಕರಣಗಳು ಕಂಡುಬಂದಿವೆ.
ಪೊಲೀಸರ ಪ್ರಕಾರ, ದೆಹಲಿಯ ತಬ್ಲಿಘಿ ಜಮಾತ್ಗೆ ಸಂಬಂಧಿಸಿದ ಇಬ್ಬರು ಇದರಲ್ಲಿದ್ದು, ರಾಜೀವ್ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಈಗಾಗಲೇ ಪ್ರತ್ಯೇಕಿಸಲಾಗಿತ್ತು. ಈಗ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.