ETV Bharat / bharat

ಮಧ್ಯಪ್ರದೇಶದಲ್ಲಿ ಎರಡಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು: 8.95 ಲಕ್ಷ ರೂ. ಪರಿಹಾರ ಘೋಷಣೆ!

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಕಟ್ಟಡವೊಂದು ಕುಸಿತಗೊಂಡಿದ್ದು, ಇದೀಗ ಪರಿಹಾರ ಘೋಷಣೆ ಮಾಡಲಾಗಿದೆ.

Dewas building collapse
Dewas building collapse
author img

By

Published : Aug 26, 2020, 2:49 PM IST

ದೇವಾಸ್​(ಮಧ್ಯಪ್ರದೇಶ): ಎರಡು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಇದೀಗ ಪರಿಹಾರ ಘೋಷಣೆ ಮಾಡಿದ್ದಾರೆ.

ಮಧ್ಯಪ್ರದೇಶ: ಎರಡಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು.. ಹಲವರಿಗೆ ಗಾಯ

ಇಲ್ಲಿನ ಸ್ಟೇಷನ್​ ರಸ್ತೆಯಲ್ಲಿರುವ ಲಾಲ್​​ಗೇಟ್ ಬಳಿಯ ಎರಡಂತಸ್ತಿನ ಕಟ್ಟಡ ಕುಸಿತದಿಂದ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಅಲ್ಲದೆ ಅವಶೇಷಗಳಡಿ ಹಲವರು ಸಿಲುಕಿದ್ದರು. ಬಳಿಕ ರಕ್ಷಣಾ ಕಾರ್ಯದಲ್ಲಿ 16 ಮಂದಿಯನ್ನು ರಕ್ಷಿಸಲಾಗಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಪರಿಹಾರ ಘೋಷಣೆ

ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಇದೀಗ 8.95 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣ ಕಟ್ಟಡ ಕುಸಿತಗೊಂಡಿತ್ತು ಎಂದು ಎನ್​ಡಿಆರ್​ಎಫ್​ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.