ನವದೆಹಲಿ: ಭಾರತೀಯರು ಆರ್ಥಿಕ ಸುಧಾರಣೆಯ ಮೂಲಕ ಉತ್ತಮ ಜೀವನ ಶೈಲಿ ಬೆಳೆಸಿಕೊಳ್ಳಬೇಕು ಎಂದು ರಾಜ್ಯಸಭಾ ಎಂಪಿ ಸುರೇಶ್ ಪ್ರಭು ಕರೆ ನೀಡಿದ್ದಾರೆ.
ಐಎಂಪಿಎಆರ್ನ ದೇಶದ ಸುಮಾರು 1000 ಪ್ರಮುಖ ಮುಸ್ಲಿಂ ಮುಖಂಡರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಚಟುವಟಕೆಗಳ ಮೂಲಕ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಆಗ ದೇಶದ ಪ್ರತಿಯೊಬ್ಬ ನಾಗರಿಕನೂ ಉತ್ತಮ ಜೀವನ ಶೈಲಿ ನಡೆಸಲು ಸಮರ್ಥವಾಗಲಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಮಾತನಾಡಿದ ಆರ್‌ಬಿಐನ ಮಾಜಿ ಉಪಗವರ್ನರ್ ಎಚ್.ಆರ್ ಖಾನ್, ವಾಸ್ತವ ಮತ್ತು ಗ್ರಹಿಕೆಯ ಕಾರಣದಿಂದ ಅಪನಂಬಿಕೆಯ ಗಾಳಿ ಇದೆ. ಒಂದು ದೇಶದಲ್ಲಿ ಶೇ.17ರಷ್ಟು ಜನಸಂಖ್ಯೆಯು ಆರ್ಥಿಕ ಅಭಿವೃದ್ಧಿಯ ಭಾಗವಾಗಿರದಿದ್ದರೆ, ಸ್ಪಷ್ಟವಾಗಿ ಆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ನೀವು ಆ 17 ಶೇಕಡ ಜನರನ್ನು ಯಾವ ರೀತಿಯಲ್ಲಿ ಮುಖ್ಯವಾಹಿನಿಗೆ ತಂದು ಅವರನ್ನು ಸಮರ್ಥರನ್ನಾಗಿ ಮಾಡುತ್ತೀರಿ. ಅವರಿಂದ ಅಪನಂಬಿಕೆಗಳನ್ನು ಹೇಗೆ ದೂರ ಸರಿಸುತ್ತೀರಿ ಎಂಬುದು ಸಹ ಮುಖ್ಯ ಎಂದರು.
ಇನ್ನು ಕುಶಲಕರ್ಮಿಗಳ ಬಗ್ಗೆ ಮಾತನಾಡಿದ ಸುರೇಶ್ ಪ್ರಭು, ಎರಡು ಶತಮಾನಗಳ ಹಿಂದೆ ಭಾರತದ ಆರ್ಥಿಕತೆಯು ಎರಡನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇದಕ್ಕೆ ಕಾರಣ ಕಾರ್ಖಾನೆಗಳು ಅಲ್ಲ. ಬದಲಾಗಿ ಕುಶಲಕರ್ಮಿಗಳು. ಆ ಸಂದರ್ಭದಲ್ಲಿ ನಿಜವಾದ ಸಮೃದ್ಧಿ ಮತ್ತು ಪ್ರಗತಿಯನ್ನು ಅವರೇ ತಂದುಕೊಟ್ಟಿದ್ದರು ಎಂದು ಸ್ಮರಿಸಿದರು.
ಆದರೆ, ಕೈಗಾರಿಕಾ ಕ್ರಾಂತಿಯ ಬಳಿಕ ಕುಶಲಕರ್ಮಿಗಳ ಕೊಡುಗೆ ಕಡಿಮೆಯಾಗ ತೊಡಗಿತು. ಆರ್ಥಿಕ ಅಭಿವೃದ್ಧಿಗೆ ಅವರ ಕೊಡುಗೆ ಕಳೆದುಕೊಂಡೆವು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದು ಕುಶಲಕರ್ಮಿಗಳಲ್ಲಿ ಸಮೃದ್ಧಿಯನ್ನು ತರುತ್ತದೆ. ಈ ಮೂಲಕ ಆರ್ಥಿಕತೆ ಅಭಿವೃದ್ಧಿಯಾಗಬಹುದು ಎಂದರು.