ಹೈದರಾಬಾದ್: ಕರೋನಾ ವೈರಸ್ ಸೋಂಕಿನಿಂದ ಲಾಕ್ಡೌನ್ ಮರೆ ಹೋಗಿರುವ ವಿಶ್ವ, ಶುಕ್ರವಾರ ಒಂದು ದಶಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳ ಗೆರೆ ದಾಟಿದೆ. ಪ್ರಸ್ತುತ ವೈರಲ್ ಸೋಂಕು ಪತ್ತೆ ಮಾಡಲು ಬೇರೆ ರೀತಿಯ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವ ಮತ್ತು ಅನುಮೋದಿಸುವ ಅತ್ಯಗತ್ಯವಾಗಿದೆ. ತೀವ್ರವಾದ ಉಸಿರಾಟದ ಕಾಯಿಲೆಗೆ ಕಾರಣವಾಗಿರುವ ಕೋವಿಡ್ -19ಕ್ಕೆ ಪ್ರತಿರಕ್ಷೆಯನ್ನು ಪತ್ತೆ ಮಾಡುವುದು ತುರ್ತು ಅಗತ್ಯವಾಗಿದೆ. ವರದಿಗಳ ಪ್ರಕಾರ, ವೈದ್ಯಕೀಯ ರೋಗ ನಿರ್ಣಯ ಕಂಪನಿಗಳು ಇದರ ಪರಿಹಾರಕ್ಕಾಗಿ ಹರಸಾಹಸ ಮಾಡುತ್ತಿವೆ ಪ್ರಪಂಚದಾದ್ಯಂತದ ಎಲ್ಲ ಸರ್ಕಾರಗಳು ಲಕ್ಷಾಂತರ ಜನರು ಈ ಪ್ರತಿಕಾಯ ಪರೀಕ್ಷೆಗೆ ಒಳಪಡುವುದನ್ನು ಆತಂಕದಿಂದ ಎದುರುನೋಡುತ್ತಿವೆ.
ಯುರೋಪ್ನಲ್ಲಿ ಯುರೋ ಇಮ್ಮುನ್ ಎಂಬ ಜರ್ಮನ್ ಕಂಪನಿಯು ಇತ್ತೀಚೆಗೆ ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, ಕೊರೊನಾ ವೈರಸ್ ಪತ್ತೆಗೆ ಅವರ ಪರೀಕ್ಷೆಯನ್ನು ಯೂರೋಪ್ ಒಳಗೆ ಮಾರಾಟ ಮಾಡಲು ಈ ಅನುಮತಿ ಅನುವು ಮಾಡಿಕೊಡುತ್ತದೆ. "ಪ್ರತಿಕಾಯ ಪತ್ತೆಗಾಗಿ, ವಿಶೇಷವಾಗಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಈ ಸಮಯದಲ್ಲಿ ಕಾತುರತೆಯಿಂದ ಕಾಯುತ್ತಿದ್ದಾರೆ, ಏಕೆಂದರೆ ಅವರು ಈಗಾಗಲೇ ವೈರಸ್ ಹೊಂದಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ" ಎಂದು ಯೂರೋ ಇಮ್ಮುನ್ನ ಪ್ರತಿಕಾಯ ಪರೀಕ್ಷಾ ಉತ್ಪನ್ನ ವ್ಯವಸ್ಥಾಪಕ ಕಾನ್ಸ್ಟಾಂಜೆ ಸ್ಟಿಬಾ ಹೇಳುತ್ತಾರೆ.
ಇದನ್ನು ಓದಿ:
ಲಖನೌ: ಉತ್ತರ ಪ್ರದೇಶದ ಮಸೀದಿಯೊಂದರಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅನಾರೋಗ್ಯದ ಕಾರಣದಿಂದಾಗಿ ಆರೋಗ್ಯ ಕಾರ್ಯಕರ್ತರ ಕೊರತೆಯು ಈಗಾಗಲೇ ಒತ್ತಡಕ್ಕೊಳಗಾದ ಆರೋಗ್ಯ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿದ್ದು, ಈ ರೀತಿ ಘಟನೆಗಳು ಇನ್ನಷ್ಟು ಆತಂಕ ಮೂಡಿಸುತ್ತವೆ. ಆರೋಗ್ಯ ಕಾರ್ಯಕರ್ತನು ಈಗಾಗಲೇ ಕೋವಿಡ್-19 ಅನ್ನು ಹೊಂದಿದ್ದಾನೆ ಮತ್ತು ಆದ್ದರಿಂದ ರೋಗ ನಿರೋಧಕನಾಗಿರುತ್ತಾನೆ ಎಂದು ಪರೀಕ್ಷೆಯು ತೋರಿಸಿದರೆ, ಅವರು ಸೋಂಕಿನ ಭಯವಿಲ್ಲದೇ ಕೆಲಸಕ್ಕೆ ಮರಳಬಹುದು.
ಪ್ರತಿಕಾಯ ಪರೀಕ್ಷೆಯು ವಿವಿಧೋದ್ದೇಶ ಹೊಂದಿದೆ ಎಂದು ಸಂಶೋಧನೆ ಹೇಳುತ್ತದೆ: ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಲಸಿಕೆಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಬಹುದು, ಅಥವಾ ವ್ಯಕ್ತಿಯಲ್ಲಿ ಶಂಕಿತ ಸೋಂಕಿನ ನಂತರ ವಾರಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ಬಳಿಕ ಸೋಂಕಿನ ಪರೀಕ್ಷೆ ನಡೆಸುವುದು. ಒಂದು ದೇಶದ ಜನಸಂಖ್ಯೆಯಲ್ಲಿ ಎಷ್ಟು ಲಕ್ಷಣ ರಹಿತ ಪ್ರಕರಣಗಳು ಇವೆ ಎಂದು ಸಾರ್ವಜನಿಕ ನೀತಿ ನಿರೂಪಕರಿಗೆ ತಿಳಿಸುವುದು ಬಹುಶಃ ಪರೀಕ್ಷೆಯ ಪ್ರಮುಖ ಪ್ರಸ್ತುತ ಬಳಕೆಯಾಗಿದೆ.
ಪ್ರಸ್ತುತ ವೈರಲ್ ಸೋಂಕನ್ನು ಸೂಚಿಸುವ ವೈರಲ್ ಆರ್ಎನ್ಎ ಪತ್ತೆ ಮಾಡುವ ಪಿಸಿಆರ್ ಪರೀಕ್ಷೆಗಳನ್ನು ಕೋವಿಡ್-19 ಪ್ರಕರಣಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ ಮತ್ತು ಅದು ಸಂಪರ್ಕ ಪತ್ತೆ ಮತ್ತು ಪರೀಕ್ಷೆಯ ಅಗತ್ಯ ಭಾಗವಾಗಿದೆ. ಆದಾಗ್ಯೂ, ಜಾಗತಿಕ ಪೂರೈಕೆ ಸವಾಲುಗಳಿವೆ, ಪಿಸಿಆರ್ ಪ್ರೈಮರ್ಗಳಿಗೆ ಭಾರಿ ಬೇಡಿಕೆಯಿದೆ, ಜೊತೆಗೆ ವೈಯಕ್ತಿಕ ಯಂತ್ರಗಳ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳು ಬೇಕಿವೆ.