ಬೆಂಗಳೂರು: ವ್ಯಕ್ತಿ ಮತ್ತು ಉದ್ಯಮದ ನಡುವೆ ಒಂದು ಸಾಮಾಜಿಕ ಚೌಕಟ್ಟು ಇರಬೇಕು. ಆದ್ರೆ ಭಾರತದಲ್ಲಿ ಈ ಎರಡೂ ಒಟ್ಟಿಗೆ ಬೆಸೆದುಕೊಂಡಿದ್ದು, ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ, ಎಂದು ಇನ್ಫೋಸಿಸ್ ಮುಖ್ಯಸ್ಥ ನಂದನ್ ನೀಲೇಕಣಿ ಅಭಿಪ್ರಾಯಪಟ್ಟಿದ್ದಾರೆ.
ವಿ.ಜಿ.ಸಿದ್ಧಾರ್ಥ್ ಸಾವು ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿಯ ವೈಫಲ್ಯ ಆತನ ಉದ್ಯಮದ ನಡುವೆ ಒಂದು ಚೌಕಟ್ಟು ಇರಬೇಕು ಎಂದಿದ್ದಾರೆ.
ವೈಫಲ್ಯ, ವ್ಯಕ್ತಿ ಮತ್ತು ಸಂಸ್ಥೆ ಎಲ್ಲ ಒಂದಕ್ಕೊಂದು ಬೆರೆತುಹೋಗಿವೆ. ಹೀಗಾಗಿ ಸಂಸ್ಥೆಯ ಮೇಲೆ ಹಲವು ಅಡ್ಡ ಪರಿಣಾಮಗಳು ಬೀರುತ್ತವೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ನೀಲೇಕಣಿ ಮತ್ತು ವಿ.ಜಿ.ಸಿದ್ಧಾರ್ಥ್ ಪರಸ್ಪರ ಪರಿಚಿತರಾಗಿದ್ದು, ಇನ್ಫೋಸಿಸ್ ಬೆಳವಣಿಗೆಯಲ್ಲಿ ಇಬ್ಬರ ಪಾತ್ರವೂ ಇದೆ. ಅಲ್ಲದೆ ಕೆಫೆ ಕಾಫಿ ಡೇ ಉದ್ಯಮದಲ್ಲೂ ನೀಲೇಕಣಿ 2.6 ರಷ್ಟು ಪಾಲುದಾರಿಕೆ ಹೊಂದಿದ್ದಾರೆ.