ETV Bharat / bharat

ಕಳಪೆ ಮಟ್ಟದಲ್ಲೇ ಸಾಗಿದ ದೆಹಲಿಯ ವಾಯು ಗುಣಮಟ್ಟ

ದೆಹಲಿ ಸರ್ಕಾರ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಕ್ರಮ ಕೈಗೊಂಡಿದ್ದು, ಇದಕ್ಕೆ ಇತರ ರಾಜ್ಯಗಳ ಸಹಕಾರ ಕೂಡ ಬೇಕು ಎಂದು ದೆಹಲಿ ಪರಿಸರ ಇಲಾಖೆ ಸಚಿವ ಗೋಪಾಲ್ ರೈ ಹೇಳಿದ್ದಾರೆ.

Delhi's air quality
ದೆಹಲಿಯ ವಾಯು ಗುಣಮಟ್ಟ
author img

By

Published : Oct 10, 2020, 2:51 PM IST

ನವದೆಹಲಿ: ಕೋವಿಡ್​ ಲಾಕ್​ಡೌನ್​ ವೇಳೆ ದಾಖಲೆ ಮಟ್ಟದಲ್ಲಿ ಸುಧಾರಣೆ ಕಂಡಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ ಮತ್ತೆ 'ಕಳಪೆ' ಮಟ್ಟದಲ್ಲೇ ಸಾಗಿದೆ.

ದೆಹಲಿಯ ಜಹಾಂಗೀರ್‌ಪುರಿ ಹಾಗೂ ಐಟಿಒ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಕ್ರಮವಾಗಿ 267 ಮತ್ತು 257 ರಷ್ಟು ದಾಖಲಾಗಿದೆ. ದ್ವಾರಕಾ ಸೆಕ್ಟರ್-8 ರಲ್ಲಿ ಎಕ್ಯೂಐ 248, ಆನಂದ್ ವಿಹಾರದಲ್ಲಿ 230 ರಷ್ಟು ದಾಖಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ತಿಳಿಸಿದೆ.

ನಗರದಲ್ಲಿ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಪ್ರಗತಿ ಮೈದಾನದಲ್ಲಿ ಮಾಲಿನ್ಯ ನಿಯಂತ್ರಣ ಯಂತ್ರವನ್ನು (anti-smog gun) ಅಳವಡಿಸಲಾಗಿದ್ದು, ಇಲ್ಲಿಗೆ ದೆಹಲಿ ಪರಿಸರ ಇಲಾಖೆ ಸಚಿವ ಗೋಪಾಲ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೆಹಲಿ ಸರ್ಕಾರ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಕ್ರಮ ಕೈಗೊಂಡಿದ್ದು, ಇದಕ್ಕೆ ಇತರ ರಾಜ್ಯಗಳ ಸಹಕಾರ ಕೂಡ ಬೇಕು ಎಂದು ಗೋಪಾಲ್ ರೈ ಹೇಳಿದ್ದಾರೆ.

ವಾಯುಗುಣಮಟ್ಟ ಸೂಚ್ಯಂಕವು, 0 ಮತ್ತು 50ರ ನಡುವೆ ಇದ್ದರೆ ಅದನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ. 51 ರಿಂದ 100ರ ನಡುವೆ ಇದ್ದರೆ 'ತೃಪ್ತಿಕರ', 101 ರಿಂದ 200ರೊಳಗೆ ಇದ್ದರೆ 'ಮಧ್ಯಮ', 201ರಿಂದ 300ರ ನಡುವೆ 'ಕಳಪೆ', 301ರಿಂದ 400ರಲ್ಲಿ ಇದ್ದರೆ 'ಅತಿ ಕಳಪೆ', 401ರಿಂದ 500 ಇದ್ದರೆ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.