ನವದೆಹಲಿ: ದೆಹಲಿಯ ಸುಲ್ತಾನಪುರಿ ಮುನ್ಸಿಪಲ್ ಕಾರ್ಪೊರೇಷನ್ನ ಪ್ರಾಥಮಿಕ ಶಾಲೆಯ ಶಿಕ್ಷಕ ತರಗತಿಯ ಅವಧಿಯಲ್ಲಿ ನಿದ್ದೆಗೆ ಜಾರಿದ ವಿರಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತರಗತಿಯಲ್ಲಿ ಪಾಠ ಹೇಳುವುದನ್ನು ಬಿಟ್ಟು ಶಿಕ್ಷಕ ಖುರ್ಚಿಯಲ್ಲಿ ಕುಳಿತು ಬೆಂಚ್ ಮೇಲೆ ಕಾಲು ಚಾಚಿ ನಿದ್ರೆಗೆ ಜಾರಿದ್ದಾರೆ. ತರಗತಿಯಲ್ಲಿ ಗಲಾಟೆ ಮಾಡಿ ತನ್ನ ನಿದ್ದೆಗೆ ಭಂಗ ತಂದ ವಿದ್ಯಾರ್ಥಿಗಳನ್ನು ಶಿಕ್ಷಿಸಿದ್ದಾನೆ. ವಿದ್ಯಾರ್ಥಿಗಳು ಅತ್ತ ಪರಸ್ಪರ ತಳಾಡುತ್ತಿದ್ದಂತೆ ಮತ್ತೆ ನಿದ್ರೆಗೆ ಜಾರಿದ್ದಾನೆ. ಶಿಕ್ಷಕನ ಈ ವರ್ತನೆಯ ವಿರುದ್ಧ ಶಾಲೆಯ ಹಿರಿಯ ಶಿಕ್ಷಕರಾಗಲಿ ಅಥವಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ.