ನವದೆಹಲಿ: ಕೊರೊನಾ ಭೀತಿಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಲಾಕ್ಡೌನ್ ವಿಧಿಸಲಾಗಿದೆ. ಇದರಿಂದಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಹೊರತಾಗಿಯೂ, ಲಾಕ್ಡೌನ್ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ.
ದೆಹಲಿಯ ವಾಯುಗುಣಮಟ್ಟ ತೀವ್ರ ಮಟ್ಟದಲ್ಲಿ ಸುಧಾರಿಸುತ್ತಿದ್ದು, ಮಾಲಿನ್ಯ ಪ್ರಮಾಣದಲ್ಲಿ ತೀವ್ರ ಕುಸಿತವಾಗಿದೆ. ಮಂಗಳವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 88 ದಾಖಲಾಗಿದ್ದು, ಇದು ತೃಪ್ತಿಕರವೆಂದು ಪರಿಗಣಿಸಲಾಗಿದೆ.
ಲಾಕ್ಡೌನ್ ಸಮಯದಲ್ಲಿ ದೆಹಲಿಯಲ್ಲಿ ಮಾಲಿನ್ಯ ಕಡಿಮೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿ ಜಾರಿಗೆ ತರಲಾದ ಲಾಕ್ಡೌನ್ನಿಂದಾಗಿ ಎಲ್ಲಾ ಕಾರ್ಖಾನೆಗಳು ಮುಚ್ಚಿವೆ. ಕಲುಷಿತ ಹೊಗೆಯ ಹೊರಸೂಸುವಿಕೆ ಪ್ರಮಾಣವೂ ಕಡಿಮೆಯಾಗಿದೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಇದರಿಂದಾಗಿ ದೆಹಲಿಯ ವಾಯುಗುಣಮಟ್ಟ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.
ಪ್ರದೇಶವಾರು ವಾಯು ಗುಣಮಟ್ಟ ಸೂಚ್ಯಂಕ:
- ಅಶೋಕ್ ವಿಹಾರ್ 74
- ಅಯಾ ನಗರ 86
- ಮಥುರಾ ರಸ್ತೆ 96
- ಡಿಟಿಯು 102
- ದ್ವಾರಕಾ 100
- ಜಹಾಂಗೀರ್ಪುರಿ 90
- ಮಂದಿರ ಮಾರ್ಗ 78
- ಮುಂಡ್ಕಾ 74
- ನಜಫ್ನಗರ 85
- ಉತ್ತರ ಕ್ಯಾಂಪಸ್ 99
- ಓಖ್ಲಾ 80
- ಪಾತ್ಪರ್ಗಂಜ್ 93
- ರೋಹಿಣಿ 98