ನವದೆಹಲಿ: ಮಹಿಪಾಲ್‌ಪುರದ ರಂಗ್‌ಪುರಿಯ ಇಸ್ರೇಲಿ ಕ್ಯಾಂಪ್ ಪ್ರದೇಶದಲ್ಲಿದ್ದ ಸುಮಾರು 200 ಮನೆಗಳನ್ನು ದೆಹಲಿ ಪೊಲೀಸರು ನೆಲಸಮ ಮಾಡಿದ್ದಾರೆ.
ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಸುಮಾರು 800ರಿಂದ ಸಾವಿರ ಮಂದಿ ನಿರಾಶ್ರಿತರಾಗಿದ್ದು, ಕೊರೆಯುವ ಚಳಿಯಲ್ಲಿ ರಸ್ತೆಯಲ್ಲೇ ಕಾಲ ಕಳೆದಿದ್ದಾರೆ.
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜನರು, ನಾವು ಪಾವತಿಸಿದ ವಿದ್ಯುತ್ ಬಿಲ್‌ಗಳನ್ನು ಹೊಂದಿದ್ದೇವೆ. ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಪತ್ರವಿದೆ ಎಂದು ಹೇಳಿದ್ದಾರೆ.
ಕೊಳಗೇರಿ ಮೂಲದ ಸ್ಥಳೀಯ ಮುಖಂಡ ರಾಮ್‌ಲಾಲ್ ಎಂಬುವವರು ಮಾತನಾಡಿ, ನಮ್ಮ ಮನೆಗಳನ್ನು ನೆಲಸಮಗೊಳಿಸುವ ಮೊದಲು ಪೊಲೀಸರು ಕೇವಲ 10 ನಿಮಿಷಗಳ ಸಮಯವನ್ನು ನೀಡಿದರು. "ಪ್ರತಿಯೊಬ್ಬರೂ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಮಯ ಕೂಡ ನೀಡಲಿಲ್ಲ" ಎಂದು ಹೇಳಿದ್ದಾರೆ.