ETV Bharat / bharat

ದೆಹಲಿಯ ದಕ್ಷಿಣ ಭಾರತದ ರೆಸ್ಟೋರೆಂಟ್​​ನ ಸಾಂಬಾರ್​ನಲ್ಲಿ ಹಲ್ಲಿ ಪತ್ತೆ..! - ಶರವಣ ಭವನ

ನವದೆಹಲಿಯ ಪ್ರಖ್ಯಾತ ರೆಸ್ಟೋರೆಂಟ್​ನಲ್ಲಿ ಸತ್ತ ಹಲ್ಲಿ ಬಿದ್ದಿದೆ ಎಂದು ಗ್ರಾಹಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ಕನ್ನಾಟ್​ಪ್ಲೇಸ್​​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

restaurant in delhi
ದೆಹಲಿಯ ರೆಸ್ಟೋರೆಂಟ್​
author img

By

Published : Aug 3, 2020, 10:45 AM IST

ನವದೆಹಲಿ: ರಾಷ್ಟ್ರ ರಾಜಧಾನಿಯ ದಕ್ಷಿಣ ಭಾರತದ ರೆಸ್ಟೋರೆಂಟ್​ನ ಆಹಾರದಲ್ಲಿ ಸತ್ತ ಹಲ್ಲಿ ಕಂಡು ಬಂದಿದ್ದು, ಗ್ರಾಹಕ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್​ ಆಗಿದೆ.

ಪಂಕಜ್​ ಅಗರ್ವಾಲ್​ ​ ಎಂಬಾತ ಕನ್ನಾಟ್​ ಪ್ಲೇಸ್​​ನಲ್ಲಿರುವ ಸರವಣ ಭವನ ರೆಸ್ಟೋರೆಂಟ್​ನಲ್ಲಿ ಸಾಂಬಾರ್​ ಸೇವಿಸುವ ವೇಳೆ ​ ಹಲ್ಲಿ ಪತ್ತೆಯಾಗಿದ್ದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ದೆಹಲಿಯ ರೆಸ್ಟೋರೆಂಟ್​

ಈ ವಿಡಿಯೋದಲ್ಲಿ, ನಾನು ಸ್ನೇಹಿತರ ಜೊತೆಗೆ ಆಗಸ್ಟ್​ 1ರಂದು ಈ ರೆಸ್ಟೋರೆಂಟ್​ಗೆ ರಾತ್ರಿ ಊಟಕ್ಕೆ ಬಂದಿದ್ದು, ದೋಸೆ ಮತ್ತು ರೈಸ್ ಆರ್ಡರ್ ಮಾಡಿದ್ದೆ. ಈ ವೇಳೆ, ತಂದ ಸಾಂಬಾರ್​​ನಲ್ಲಿ ಸತ್ತ ಹಲ್ಲಿಯೊಂದು ಕಾಣಿಸಿದೆ ಎಂದಿದ್ದಾರೆ. ಜೊತೆಗೆ ರೆಸ್ಟೋರೆಂಟ್​ನವರು ಈ ಬಗ್ಗೆ ಕ್ಷಮಾಪಣೆ ಕೇಳಿ, ಮತ್ತೊಮ್ಮೆ ಈ ರೀತಿಯ ಘಟನೆ ನಡೆಯುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ವೇಳೆ, ಅಗರ್ವಾಲ್​ ಕನ್ನಾಟ್​ಪ್ಲೇಸ್​​ನಲ್ಲಿರುವ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಆಹಾರದ ಮಾದರಿಗಳನ್ನು ತೆಗೆದುಕೊಂಡಿದ್ದು, ಪರಿಶೀಲನೆಗೆ ಕಳುಹಿಸಿದ್ದಾರೆ.

ಸ್ಯಾಂಪಲ್​ಗಳ ವರದಿ ಬಂದ ನಂತರ ರೆಸ್ಟೋರೆಂಟ್​ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದು, ಐಪಿಸಿ ಸೆಕ್ಷನ್​ 269 ಹಾಗೂ 336ರ ಅಡಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.