ನವದೆಹಲಿ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಈ ಬಾರಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಬಿಜೆಪಿ ವಲಯದಲ್ಲಿ ಚಾಣಕ್ಯ ಎಂದು ಕರೆಸಿಕೊಳ್ಳುವ ಅಮಿತ್ ಶಾ ಸಹ ಇಂದೇ ಸಚಿವರಾಗಿ ಪದಗ್ರಹಣ ಮಾಡಿದರು.
ಪ್ರಧಾನಿ ಮೋದಿ ಅವರೊಂದಿಗೆಯೆ ಬಿಜೆಪಿಯ ಪ್ರಭಾವಿ ನಾಯಕರು ಎಂದು ಗುರುತಿಸಿಕೊಂಡ ರಾಜನಾಥ್ ಸಿಂಗ್ ಮಹತ್ವದ ಗೃಹ ಖಾತೆಯನ್ನು ಹಾಗೂ ನಿತಿನ್ ಗಡ್ಕರಿ ಸಾರಿಗೆ ಇಲಾಖೆಯ ಜವಾಬ್ದಾರಿ ನಿಭಾಯಿಸಿದ್ದರು. ಬಿಜೆಪಿ ಅಧ್ಯಕ್ಷರಾಗಿ , ದೇಶದಲ್ಲಿ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಜಯಿಸಲು ರಣತಂತ್ರ ರೂಪಿಸಿ, ಯಶಸ್ಸು ಕಂಡ ಅಮಿತ್ ಶಾ ಸಂಪುಟದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜನಾಥ್ಸಿಂಗ್
ಉತ್ತರಪ್ರದೇಶದ ಸಿಎಂ ಆಗಿ, ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಮಾಡಿದ ರಾಜನಾಥ್ ಸಿಂಗ್ ಕಳೆದ ಬಾರಿ ಗೃಹ ಸಚಿವರಾಗಿ ಅತ್ಯಂತ ಜವಾಬ್ದಾರಿಯುತ ಕೆಲಸ ನಿಭಾಯಿಸಿದರು. ಎರಡು ಬಾರಿ ಬಿಜೆಪಿ ಅಧ್ಯಕ್ಷರೂ ಆಗಿದ್ದ ಇವರು, ಆರ್ಎಸ್ಎಸ್ ಕಟ್ಟಾಳು ಎಂದೇ ಪ್ರಸಿದ್ಧರು.
-
Delhi: Lucknow BJP MP Rajnath Singh takes oath as Union Minister pic.twitter.com/hswDCCZ51K
— ANI (@ANI) May 30, 2019 " class="align-text-top noRightClick twitterSection" data="
">Delhi: Lucknow BJP MP Rajnath Singh takes oath as Union Minister pic.twitter.com/hswDCCZ51K
— ANI (@ANI) May 30, 2019Delhi: Lucknow BJP MP Rajnath Singh takes oath as Union Minister pic.twitter.com/hswDCCZ51K
— ANI (@ANI) May 30, 2019
ಮಿರ್ಜಾಪುರದ ಶಾಸಕರಾಗಿ ಆರಂಭವಾದ ಇವರ ರಾಜಕೀಯ ಜೀವನ, ರಾಜ್ಯ ಶಿಕ್ಷಣ ಖಾತೆ, ರಾಜ್ಯಸಭೆಯಲ್ಲಿ ಸ್ಥಾನ, ಉತ್ತರಪ್ರದೇಶದ ಸಿಎಂ, ಕೇಂದ್ರ ಕೃಷಿ ಖಾತೆ, 2014ರಲ್ಲಿ ಕೇಂದ್ರ ಗೃಹ ಖಾತೆವರೆಗೆ ಸಾಗಿಬಂದಿದೆ. ಲಖನೌ ಕ್ಷೇತ್ರದಿಂದಲೇ ಮತ್ತೆ ವಿಜಯ ಸಾಧಿಸಿರುವ ರಾಜನಾಥ್ ಸಿಂಗ್ ಅವರಿಗೆ ಇದೀಗ ಮತ್ತೆ ಸಚಿವರಾಗುವ ಭಾಗ್ಯ ಒಲಿದು ಬಂದಿದೆ. ಇವರು ಮೋದಿ ಸಂಪುಟದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಈ ಬಾರಿಯೂ ರಾಜನಾಥ್ ಸಿಂಗ್ಗೆ ಅಗ್ರಸ್ಥಾನ ನೀಡಲಾಗಿದೆ.
ಅಮಿತ್ ಶಾ
1997, 1998, 2002 ಹಾಗೂ 2017ರಲ್ಲಿ ಸತತವಾಗಿ ಸರ್ಖೇಜ್ದ ಶಾಸಕರಾಗಿ ಆಯ್ಕೆಯಾದ ಅಮಿತ್ ಶಾ, ಗುಜರಾತ್ನಲ್ಲಿ ಮೋದಿ ಸಿಎಂ ಆಗಿದ್ದಾಗ ಗೃಹ ಸಚಿವರಾಗಿ ಕೆಲಸ ಮಾಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಚಾಣಕ್ಯನಂತೆ ಕೆಲಸ ಮಾಡಿ, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಿಸಿದ್ದರು.
-
Delhi: BJP President Amit Shah takes oath as Union Minister pic.twitter.com/fQEwvGmro1
— ANI (@ANI) May 30, 2019 " class="align-text-top noRightClick twitterSection" data="
">Delhi: BJP President Amit Shah takes oath as Union Minister pic.twitter.com/fQEwvGmro1
— ANI (@ANI) May 30, 2019Delhi: BJP President Amit Shah takes oath as Union Minister pic.twitter.com/fQEwvGmro1
— ANI (@ANI) May 30, 2019
ಕಳೆದ ಬಾರಿ ಮೋದ ಸರ್ಕಾರದ ಮಹತ್ವದ ನಿರ್ಧಾರಗಳ ಹಿಂದೆ ನಿಂತು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಾ ಪಾತ್ರ ಪ್ರಮುಖವಾಗಿದೆ. ಈ ಬಾರಿ ಲೋಕಸಭೆ ಚುನಾವಣೆಗೆ ಗಾಂಧಿ ನಗರದಿಂದ ಸ್ಪರ್ಧಿಸಿ, ಗೆಲವು ಕಂಡಿದ್ದಾರೆ. ಇದೀಗ ಮೋದಿ ಸಂಪುಟ ಸೇರಿ ಮಹತ್ವದ ಖಾತೆ ನಿಭಾಯಿಸುವ ಹೊಣೆ ಇವರ ಹೆಗಲೇರಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸೇರಿರುವ ಅಮಿತ್ ಶಾ ನಂಬರ್ ತ್ರೀ ಸ್ಥಾನದಲ್ಲಿದ್ದಾರೆ.
.
ನಿತಿನ್ ಗಡ್ಕರಿ
-
Delhi: Nitin Gadkari and Nirmala Sitharaman take oath as Union Ministers pic.twitter.com/1ZZTTO6NnP
— ANI (@ANI) May 30, 2019 " class="align-text-top noRightClick twitterSection" data="
">Delhi: Nitin Gadkari and Nirmala Sitharaman take oath as Union Ministers pic.twitter.com/1ZZTTO6NnP
— ANI (@ANI) May 30, 2019Delhi: Nitin Gadkari and Nirmala Sitharaman take oath as Union Ministers pic.twitter.com/1ZZTTO6NnP
— ANI (@ANI) May 30, 2019
ಬಿಜೆಪಿ ಹಿರಿಯ ನಾಕಯ ನಿತಿನ್ ಗಡ್ಕರಿ ಮಹಾರಾಷ್ಟ್ರದ ಲೋಕೋಪಯೋಗಿ ಸಚಿರಾಗಿದ್ದವರು. ಅಲ್ಲಿಂದ 2014ರಲ್ಲಿ ಲೋಕಸಭೆ ಪ್ರವೇಶಿಸಿ, ಕೇಂದ್ರ ಸರ್ಕಾರದ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ, ಪಂಚಾಯತ್ ರಾಜ್ ಖಾತೆ, ಗ್ರಾಮೀಣಾಭಿವೃಧ್ಧಿ ಖಾತೆ, ನದಿ ಅಭಿವೃಧ್ಧಿ ಹಾಗೂ ಗಂಗಾ ಪುನಶ್ಚೇತನ ಖಾತೆ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾಗಿ ಉಪಯುಕ್ತ ಕೆಲಗಳನ್ನು ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ. ಮತ್ತೊಮ್ಮೆ ನಾಗ್ಪುರದಿಂದ ಗೆದ್ದು ಬಂದಿರುವ ಗಡ್ಕರಿ, ಕೇಂದ್ರ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿ ಆಯ್ಕೆ ಆಗಿದ್ದು, ಮೋದಿ ನಂತರದ ನಾಲ್ಕನೇ ಸ್ಥಾನದಲ್ಲಿದ್ದಾರೆ.