ETV Bharat / bharat

'ಸಿಗ್ನಲ್​ಗಳಲ್ಲಿ ವಾಹನಗಳನ್ನು ದಯಮಾಡಿ ಆಫ್ ಮಾಡಿ' - ವಾಯು ಗುಣಮಟ್ಟ ಸೂಚ್ಯಂಕ

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕುಸಿಯುತ್ತಿದ್ದು, ಸಿಎಂ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಾಯುಮಾಲಿನ್ಯ ನಿಯಂತ್ರಣ ಅಭಿಯಾನ ಆರಂಭಿಸಿದೆ.

Delhi CM
ಅರವಿಂದ್ ಕೇಜ್ರಿವಾಲ್
author img

By

Published : Oct 15, 2020, 3:41 PM IST

ನವದೆಹಲಿ: ರಸ್ತೆಗಳಲ್ಲಿ ಸಿಗ್ನಲ್​ ವೇಳೆಯಲ್ಲಿ ನಿಂತುಕೊಳ್ಳುವಾಗ ಕಡ್ಡಾಯವಾಗಿ ಚಾಲಕರು ತಮ್ಮ ವಾಹನವನ್ನು ಆಫ್ ಮಾಡಬೇಕೆಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಅಭಿಯಾನವೊಂದನ್ನು ಸರ್ಕಾರ ಗುರುವಾರ ಆರಂಭಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಸಿಎಂ ಕೇಜ್ರಿವಾಲ್ ವಾಹನ ಸವಾರರಿಗೆ ಮನವಿ ಮಾಡಿದರು.

ನಗರದಲ್ಲಿ ಒಂದು ಕೋಟಿ ವಾಹನಗಳನ್ನು ನೋಂದಾವಣೆ ಮಾಡಿಕೊಳ್ಳಲಾಗಿದೆ. ದಿನಕ್ಕೆ 30ರಿಂದ 40 ಲಕ್ಷ ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಇದರಿಂದ ವಾಯುಮಾಲಿನ್ಯವೂ ಕೂಡಾ ಹೆಚ್ಚಾಗುತ್ತಿದೆ ಎಂದು ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದರು.

ದಾಖಲೆಗಳಂತೆ ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ ಮಧ್ಯಾಹ್ನದ ವೇಳೆಗೆ ಕನಿಷ್ಠ ಮಟ್ಟದಲ್ಲಿ ಇರುತ್ತದೆ. ಒಂದು ಕ್ಯೂಬಿಕ್ ಮೀಟರ್​ಗೆ 2.5 ಮಿಲಿಗ್ರಾಂನಷ್ಟು ಮಾಲಿನ್ಯಕಾರಕ ಅಂಶಗಳು ದೊರೆಯುತ್ತವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಇನ್ನು ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಬರುವ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (ಎಸ್​ಎಎಫ್​ಎಆರ್​) ಗಾಳಿಯ ಗುಣಮಟ್ಟವನ್ನು ಉತ್ತಮ, ಸಮಾಧಾನಕರ, ಮಧ್ಯಮ, ಕಳಪೆ, ಅತ್ಯಂತ ಕಳಪೆ ಹಾಗೂ ಗಂಭೀರ ಎಂದು ವರ್ಗೀಕರಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಸುಮಾರು 36 ಮಾಲಿನ್ಯ ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳನ್ನು ದೆಹಲಿಯಲ್ಲಿ ಸ್ಥಾಪನೆ ಮಾಡಲಾಗಿದ್ದು, 25 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. 8 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಒಂದು ಕೇಂದ್ರದಲ್ಲಿ ಗಾಳಿಯ ಗುಣಮಟ್ಟ ಮಧ್ಯಮವಾಗಿದ್ದು, ಇನ್ನೆರಡು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ.

ದೆಹಲಿಯ ನೆರೆಹೊರೆಯ ನಗರಗಳಾದ ಗುರುಗ್ರಾಮ್, ಗಾಜಿಯಾಬಾದ್, ಫರೀದಾಬಾದ್, ನೋಯ್ಡಾ, ಗ್ರೇಟರ್​ ನೋಯ್ಡಾದಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ದೇಶದ 15 ನಗರಗಳಲ್ಲಿ ಗಾಳಿಯ ಗುಣಮಟ್ಟ ಕಳಪೆ ಮಟ್ಟದಲ್ಲಿದ್ದು ಉತ್ತರ ಪ್ರದೇಶದ ಭಾಗ್ಪಟ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಭಿವಾಡಿ, ಗ್ರೇಟರ್ ನೋಯ್ಡಾ, ಮೀರತ್, ಮುಜಾಫರ್​ನಗರ್, ಗಾಜಿಯಾಬಾದ್ ಮುಂತಾದ ನಗರಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.