ETV Bharat / bharat

ವಿಶ್ವದ 10 ಪ್ರಸಿದ್ಧ ವಿವಿಗಳಲ್ಲಿ ಇಂಟರ್ನ್​ಶಿಪ್ ಮಾಡಲು ಅವಕಾಶ ಪಡೆದ ಭಾರತೀಯ ವಿದ್ಯಾರ್ಥಿ - ದೆಹಲಿ ಮೂಲದ ಅಭಿಷೇಕ್ ಅಗ್ರಹಾರಿ

ದೆಹಲಿ ಮೂಲದ ಅಭಿಷೇಕ್ ಅಗ್ರಹಾರಿ ಎಂಬ ಇಂಜಿನಿಯರಿಂಗ್​ ವಿದ್ಯಾರ್ಥಿಗೆ, ಜಗತ್ತಿನ 10 ಕ್ಕೂ ಹೆಚ್ಚು ಯುನಿವರ್ಸಿಟಿಗಳಲ್ಲಿ ಇಂಟರ್ನ್​ಶಿಪ್​​ ಮಾಡಲು ಅವಕಾಶ ಸಿಕ್ಕಿದೆ.

s universities
ಇಂಟರ್ನ್​ಶಿಪ್​​
author img

By

Published : Oct 27, 2020, 7:11 PM IST

ದೆಹಲಿ: ವಿಶ್ವ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಬೇಕೆಂಬುದು ಪ್ರತಿಯೊಬ್ಬರ ಕನಸು. ಆದರೆ, ನಾನಾ ಕಾರಣಗಳಿಂದ ಆ ಕನಸು ಈಡೇರುವುದಿಲ್ಲ. ಕೆಲವೊಮ್ಮೆ, ಈ ಕನಸುಗಳು ಕೆಲವು ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳ ಆಯ್ಕೆ ಮಟ್ಟದಲ್ಲಿ ಹಾಳಾಗುತ್ತವೆ. ಆದರೆ, ಭಾರತೀಯ ವಿದ್ಯಾರ್ಥಿಯೊಬ್ಬ 10 ಕ್ಕೂ ಹೆಚ್ಚು ಯುನಿವರ್ಸಿಟಿಗಳಲ್ಲಿ ಇಂಟರ್ನ್​ಶಿಪ್​​ಗೆ ಆಫರ್ ಪಡೆದಿದ್ದಾರೆ.

ದೆಹಲಿ ಮೂಲದ ಅಭಿಷೇಕ್ ಅಗ್ರಹಾರಿ ಎಂಬ ಇಂಜಿನಿಯರಿಂಗ್​ ವಿದ್ಯಾರ್ಥಿಗೆ, ಯುಕೆ ಯುನಿವರ್ಸಿಟಿ ಆಫ್ ಆಕ್ಸ್​ಫರ್ಡ್ ಮತ್ತು ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಮತ್ತು ಇಲಿನಾಯ್ಸ್ ವಿವಿ ಇಂಟರ್ನ್​​ಶಿಪ್​​ ಮಾಡಲು ಅವಕಾಶ ಕಲ್ಪಿಸಿವೆ.

ನನ್ನ ಕಠಿಣ ಪರಿಶ್ರಮ ಫಲ ನೀಡಿದ್ದು, ನನಗೆ ವಿಶ್ವದ ಅನೇಕ ವಿವಿಗಳು ಇಂಟರ್ನ್​ಶಿಪ್ ಮಾಡಲು ಅವಕಾಶ ಮಾಡಿಕೊಟ್ಟಿವೆ. ಹಳೆಯ ಸಂಶೋಧನೆಗಳನ್ನು ಅನುಸರಿಸುವುದಕ್ಕೆ ನನಗೆ ಇಷ್ಟವಿಲ್ಲ. ಅದಕ್ಕೆ ನಾನು ನಿತ್ಯ ಹೊಸದನ್ನು ಅನ್ವೇಷಿಸಲು ಬಯಸುತ್ತೇನೆ ಎಂದು ಅಗ್ರಹಾರಿ ಹೇಳಿದರು.

ಅಗ್ರಹಾರಿ ಓದಿದ ಕಾಲೇಜು ಐಐಟಿ ಅಲ್ಲದ್ದರಿಂದ ಹಲವಾರು ಸಂದರ್ಶನಗಳಲ್ಲಿ ನನಗೆ ಅವಕಾಶಗಳು ಸಿಕ್ಕಿರಲಿಲ್ಲ. ಸಂದರ್ಶಕರಿಗೆ ನನ್ನ ಸಾಮರ್ಥ್ಯ ಅರ್ಥ ಮಾಡಿಸಲು ತುಂಬಾ ಕಷ್ಟ ಪಡಬೇಕಾಯಿತು ಎಂದಿದ್ದಾರೆ.

ಮುಂದಿನ ವರ್ಷ ಆಕ್ಸ್​ಫರ್ಡ್ ವಿಶ್ವ ವಿದ್ಯಾಲಯದಲ್ಲಿ ಇಂಟರ್ನ್​ಶಿಪ್ ಮಾಡುತ್ತೇನೆ. ವೀಸಾಗೆ ಅನುಕೂಲವಾಗುವಂತೆ ಸಾಕಷ್ಟು ದಾಖಲೆಗಳನ್ನು ಕೊಡಬೇಕಿದೆ. ಈ ಮಧ್ಯೆ ನಾನು ಅಮೆರಿಕದಲ್ಲಿರುವ ಇತರೆ ವಿವಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಗುರಿಯಿದ್ದರೆ ಏನಾದರೂ ಸಾಧಿಸಬಹುದೆಂದು ನಾನು ನಂಬಿದ್ದೇನೆ, ಯಾವುದೂ ಅಸಾಧ್ಯವಲ್ಲ ಎಂದು ಅಗ್ರಹಾರಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.