ಅಯೋಧ್ಯೆ(ಉತ್ತರ ಪ್ರದೇಶ): ದೀಪಾವಳಿ ಅಂಗವಾಗಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪೋತ್ಸವ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಚಾಲನೆ ನೀಡಿದ್ದಾರೆ. ಈ ದೀಪೋತ್ಸವ ಇದೀಗ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದೆ.
ಸರಯು ನದಿ ದಡದಲ್ಲಿರುವ 5 ಘಾಟ್ಗಳು ಮತ್ತು ಅಯೋಧ್ಯೆಯ 9 ದೇವಾಲಯಗಳು ಸೇರಿದಂತೆ 15 ಸ್ಥಳಗಳಲ್ಲಿ 5.50 ಲಕ್ಷಕ್ಕೂ ಹೆಚ್ಚಿನ ದೀಪಗಳನ್ನ ಬೆಳಗಿಸಲಾಗಿತ್ತು. ಈ ಮೂಲಕ ಪ್ರಪಂಚದಲ್ಲೇ ಅತಿ ಹೆಚ್ಚು ಎಣ್ಣೆ ದೀಪ ಬೆಳಗಿದ ದಾಖಲೆ ಪ್ರಾವಸೋಧ್ಯಮ ಇಲಾಖೆ, ಉತ್ತರ ಪ್ರದೇಶ ಸರ್ಕಾರ ಮತ್ತು ರಾಮ್ ಮನೋಹರ್ ಲೋಹಿಯಾ ಅವಾಧ್ ವಿಶ್ವವಿದ್ಯಾಲಯಕ್ಕೆ ಸೇರಿದೆ.
-
'Deepotsav' celebrations in Ayodhya has made it to the Guinness World records for 'the largest display of oil lamps'. It has been achieved by Department of Tourism, Government of Uttar Pradesh and Dr. Ram Manohar Lohiya Awadh University. #Diwali pic.twitter.com/sjYGZWz5Wt
— ANI UP (@ANINewsUP) October 26, 2019 " class="align-text-top noRightClick twitterSection" data="
">'Deepotsav' celebrations in Ayodhya has made it to the Guinness World records for 'the largest display of oil lamps'. It has been achieved by Department of Tourism, Government of Uttar Pradesh and Dr. Ram Manohar Lohiya Awadh University. #Diwali pic.twitter.com/sjYGZWz5Wt
— ANI UP (@ANINewsUP) October 26, 2019'Deepotsav' celebrations in Ayodhya has made it to the Guinness World records for 'the largest display of oil lamps'. It has been achieved by Department of Tourism, Government of Uttar Pradesh and Dr. Ram Manohar Lohiya Awadh University. #Diwali pic.twitter.com/sjYGZWz5Wt
— ANI UP (@ANINewsUP) October 26, 2019
ಉತ್ತರ ಪ್ರದೇಶ ಸರ್ಕಾರ ದೀಪೋತ್ಸವದ ಜವಾಬ್ದಾರಿಯನ್ನ ಪ್ರವಾಸೋದ್ಯಮ ಇಲಾಖೆಗೆ ನೀಡಿತ್ತು. ಪ್ರವಾಸೋಧ್ಯಮ ಇಲಾಖೆ ಅವಾಧ್ ವಿಶ್ವವಿದ್ಯಾಲಯಕ್ಕೆ ಈ ದೀಪೋತ್ಸವವನ್ನ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಿಡಿತ್ತು. ದೀಪೋತ್ಸವ ಗಿನ್ನೀಸ್ ದಾಖಲೆಗೆ ಸೇರಬೇಕಾದರೆ. ಎಲ್ಲಾ ಹಣತೆಗಳು 45 ನಿಮಿಷಗಳ ಕಾಲ ಉರಿಯಬೇಕಿತ್ತು.
ಕಳೆದ ವರ್ಷ ದೀಪಾವಳಿಯಲ್ಲಿ 3 ಲಕ್ಷ ದೀಪಗಳನ್ನ ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗಿತ್ತು. ಈ ಬಾರಿ 5.50 ಲಕ್ಷ ದೀಪಗಳನ್ನ ಬೆಳಗಿಸುವ ಮೂಲಕ ನೂತನ ದಾಖಲೆ ನಿರ್ಮಾಣ ಮಾಡಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್ಸಿಸಿ, ಸ್ಕೌಟ್ ವಿದ್ಯಾರ್ಥಿಗಳು ಸೇರಿದಂತೆ 5 ಸಾವಿರ ಸ್ವಯಂಸೇವಕರು ಈ ದೀಪೋತ್ಸವಕ್ಕೆ ಸಾಥ್ ನೀಡಿದ್ದಾರೆ.