ETV Bharat / bharat

ಭುಗಿಲೆದ್ದ ಸರ್ಕಾರಿ ವಿರೋಧಿ ಹೋರಾಟ... 25ಕ್ಕೂ ಹೆಚ್ಚು ಮಂದಿ ಸಾವು - ಇರಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ

ಇರಾಕ್​ನ ನಾಸಿರಿಯಾ ಪ್ರಾಂತ್ಯದಲ್ಲಿ ಸರ್ಕಾರರ ವಿರುದ್ಧ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಟಿಯರ್​ ಗ್ಯಾಸ್ ಹಾಗೂ ಗುಂಡಿನ ದಾಳಿ ನಡೆಸಿದ ಪರಿಣಾಮ 25ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

death-toll-rises-25-more-killed-in-anti-government-protests-in-southern-iraq
ಸರ್ಕಾರಿ ವಿರೋಧಿ ಹೋರಾಟ... 25ಕ್ಕೂ ಹೆಚ್ಚು ಮಂದಿ ಸಾವು
author img

By

Published : Nov 29, 2019, 9:09 AM IST

ನಾಸಿರಿಯಾ( ಇರಾಕ್​): ಸರ್ಕಾರದ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾಪಡೆಗಳು ನಡೆಸಿದ ಟಿಯರ್​ ಗ್ಯಾಸ್ ಹಾಗೂ ಗುಂಡಿನ ದಾಳಿ ನಡೆಸಿದ್ದರಿಂದ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

death-toll-rises-25-more-killed-in-anti-government-protests-in-southern-iraq
ಸರ್ಕಾರಿ ವಿರೋಧಿ ಹೋರಾಟ... 25ಕ್ಕೂ ಹೆಚ್ಚು ಮಂದಿ ಸಾವು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೀದಿಗಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಸರ್ಕಾರ ಈ ಅಸ್ತ್ರಗಳನ್ನು ಬಳಸಿದೆ.

ದಕ್ಷಿಣ ಇರಾಕ್​ನಲ್ಲಿ ಸರ್ಕಾರದ ವಿರುದ್ಧ ಭಾರಿ ಪ್ರಮಾಣದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಪರಿಣಾಮ ಭದ್ರತಾಪಡೆ ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ದೇಶದಲ್ಲಿ ಉದ್ಭವಿಸಿರುವ ಈ ಸಂಘರ್ಷ ಕೊನೆಗಾಣಿಸಲು ಇರಾಕ್​ ಸರ್ಕಾರ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜಿಸಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಹರಸಾಹಸ ಮಾಡುತ್ತಿದೆ.

ನಾಸಿರಿಯಾ ಪ್ರಾಂತ್ಯದಲ್ಲಿ ಭುಗಿಲೆದ್ದಿರುವ ಈ ಹಿಂಸಾಚಾರದಲ್ಲಿ ಸುಮಾರು 233 ಜನರು ಗಾಯಗೊಂಡಿದ್ದಾರೆ.

ಸುಮಾರು 47 ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಅಕ್ಟೋಬರ್​ನಲ್ಲಿ ಆರಂಭವಾಗಿರುವ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಇದುವರೆಗೂ ಸುಮಾರು 350 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 15 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.