ETV Bharat / bharat

ಕರಾಚಿಯಲ್ಲಿ ಕುಸಿದ ಕಟ್ಟಡ:  1ನೇ ಅಂತಸ್ತಿನಲ್ಲಿ 11 ಶವಗಳು ಪತ್ತೆ, 19ಕ್ಕೇರಿದ ಸಾವಿನ ಸಂಖ್ಯೆ

author img

By

Published : Jun 10, 2020, 1:30 PM IST

ಪಾಕಿಸ್ತಾನದಲ್ಲಿ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Pak building collapse
ಕುಸಿದ ಕಟ್ಟಡ

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ಬಹು ಮಹಡಿ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 11 ಮೃತ ದೇಹಗಳನ್ನು ಕಟ್ಟಡದ ಮೊದಲ ಮಹಡಿಯಿಂದ ಹೊರತೆಗೆಯಲಾಗಿದೆ. ಇದರಿಂದಾಗಿ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಭಾನುವಾರ ರಾತ್ರಿ ಕರಾಚಿಯ ಲ್ಯಾರಿ ಪ್ರದೇಶದಲ್ಲಿ 6 ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿತ್ತು. ಆಗಿನಿಂದಲೇ ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು, ಸೋಮವಾರ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಮಂಗಳವಾರ ಮತ್ತೆ 11 ಮೃತದೇಹಗಳನ್ನು ಮೊದಲನೇ ಅಂತಸ್ತಿನಿಂದ ಹೊರತೆಗೆದಿದ್ದು, ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಈ ಘಟನೆಯಲ್ಲಿ 12 ಮಂದಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಓರ್ವ ಗಾಯಾಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

ಲಿಯಾಕತ್​ ಕಾಲೋನಿಯಲ್ಲಿರುವ ಈ ಕಟ್ಟಡ ಸುತ್ತಮುತ್ತ 40ಕ್ಕೂ ಹೆಚ್ಚು ಅಪಾರ್ಟ್​ಮೆಂಟ್​ಗಳಿವೆ. ಎರಡು ತಿಂಗಳುಗಳ ಹಿಂದೆಯೇ ಸಿಂಧ್​ ಬಿಲ್ಡಿಂಗ್​ ಕಂಟ್ರೋಲ್​ ಅಕಾಡೆಮಿ ಈ ಕಟ್ಟಡವನ್ನು ವಾಸಿಸಲು ಯೋಗ್ಯವಲ್ಲದ ಹಾಗೂ ಅಪಾಯಕಾರಿ ಎಂದು ಘೋಷಣೆ ಮಾಡಿತ್ತು. ಆದರೂ ಇಲ್ಲಿ ಜನವಸತಿ ಇತ್ತು.

ಕಟ್ಟಡ ಕುಸಿದು ಪ್ರಾಣಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪೀಪಲ್ಸ್​ ಪಾರ್ಟಿಯ ಅಧ್ಯಕ್ಷ ಬಿಲಾವಲ್​ ಭುಟ್ಟೋ ಜರ್ದಾರಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬದೊಂದಿಗೆ ನಾನಿದ್ದೇನೆ. ಕಷ್ಟದ ಸಂದರ್ಭದಲ್ಲಿ ಅವರನ್ನು ಒಂಟಿಯಾಗಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ಘಟನೆ ಪಾಕಿಸ್ತಾನದ ಮೂರನೇ ಅತಿ ದೊಡ್ಡ ಕಟ್ಟಡ ಕುಸಿತ ಪ್ರಕರಣವಾಗಿದ್ದು, ಕರಾಚಿಯ ಗುಲ್​ಬಹರ್​​ ಪ್ರದೇಶದಲ್ಲಿ ಇಂಥದ್ದೇ ಘಟನೆ ಮಾರ್ಚ್​ನಲ್ಲಿ ನಡೆದು ಸುಮಾರು 27 ಮಂದಿ ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.