ETV Bharat / bharat

ದಾವೂದ್​ ಇಬ್ರಾಹಿಂಗೆ ಯಾವುದೇ ಸೋಂಕು ತಗುಲಿಲ್ಲ.. ಸಹೋದರ ಅನೀಸ್ ಮಾಹಿತಿ..

author img

By

Published : Jun 5, 2020, 8:32 PM IST

ದಾವೂದ್ ಮತ್ತು ಆತನ ಪತ್ನಿ ಕೊರೊನಾ ಸೋಂಕಿಗೆ ತುತ್ತಾದ ನಂತರ ಅವನ ಸಹಚರರು ಮತ್ತು ಅಂಗರಕ್ಷಕರು ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಪಾಕಿಸ್ತಾನದ ಗುಪ್ತಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಪೋಷಕ ದಾವೂದ್ ಇಬ್ರಾಹಿಂ, ಕರಾಚಿಯಲ್ಲಿ ವಾಸಿಸುತ್ತಿದ್ದಾನೆಂದು ನಂಬಲಾಗಿದೆ.

Dawood didn't test positive for COVID-19:
ದಾವೂದ್​ ಇಬ್ರಾಹಿಂಗೆ ಕೊರೊನಾ ಸೋಂಕು ತಗುಲಿಲ್ಲ

ನವದೆಹಲಿ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಕರಾಚಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ವರದಿಯನ್ನು ದಾವೂದ್ ಸಹೋದರ ಅನೀಸ್ ಇಬ್ರಾಹಿಂ ಅಲ್ಲಗಳೆದಿದ್ದಾರೆ.

ಅಪರಿಚಿತ ಸ್ಥಳದಿಂದ ಸುದ್ದಿಸಂಸ್ಥೆಯೊಂದರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅನೀಸ್, ಕೊರೊನಾ ವೈರಸ್ ಭೀಕರ ಸಾಂಕ್ರಾಮಿಕವಾಗಿದ್ದರೂ ಅವರ ಸಹೋದರ ದಾವೂದ್ ಮತ್ತು ಇಡೀ ಕುಟುಂಬ ಸುರಕ್ಷಿತವಾಗಿದೆ. ಎಲ್ಲರೂ ಮನೆಯಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. ಅಪರೂಪದ ಸಂಭಾಷಣೆಯಲ್ಲಿ ಯುಎಇ ಮತ್ತು ಪಾಕಿಸ್ತಾನದಲ್ಲಿ ವ್ಯವಹಾರ ನಡೆಸುತ್ತಿರುವುದಾಗಿ ಅನೀಸ್ ಒಪ್ಪಿಕೊಂಡಿದ್ದಾನೆ.

ದಾವೂದ್ ಮತ್ತು ಆತನ ಪತ್ನಿ ಕೊರೊನಾ ಸೋಂಕಿಗೆ ತುತ್ತಾದ ನಂತರ ಅವನ ಸಹಚರರು ಮತ್ತು ಅಂಗರಕ್ಷಕರು ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಪಾಕಿಸ್ತಾನದ ಗುಪ್ತಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಪೋಷಕ ದಾವೂದ್ ಇಬ್ರಾಹಿಂ, ಕರಾಚಿಯಲ್ಲಿ ವಾಸಿಸುತ್ತಿದ್ದಾನೆಂದು ನಂಬಲಾಗಿದೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಗಡಿಯಾಚೆಗಿನ ಅಪರಾಧಗಳ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಆದರೆ, ಪಾಕ್‌ ಮಾತ್ರ ದಾವೂದ್ ಮತ್ತು ಅವರ ಕುಟುಂಬದವರು ತನ್ನ ದೇಶದಲ್ಲಿಲ್ಲ ಎಂದು ವಾದಿಸುತ್ತಿದೆ.

ದಾವೂದ್ ಜೊತೆಯಕಲ್ಲಿ ಚೋಟಾ ಶಕೀಲ್ ಕೂಡ ಚೆನ್ನಾಗಿದ್ದಾನೆ. ಯಾರೂ ಕೊರೊನಾ ಸೊಂಕಿಗೆ ತುತ್ತಾಗಿಲ್ಲ. ನಮ್ಮ ಕುಟುಂಬದಿಂದ ಯಾರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಲ್ಲ ಎಂದಿದ್ದಾನೆ. ಸಂಭಾಷಣೆ ವೇಳೆ ತಾವು ಇರುವ ಪ್ರಸ್ತುತ ಸ್ಥಳದ ಬಗ್ಗೆ ಪಶ್ನಿಸಿದ್ದಕ್ಕೆ ಅನೀಸ್ ಮೌನವಹಿಸಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.